ಬೆಂಗಳೂರು: ತೀರಾ ಹೀನಾಯ ಸ್ಥಿತಿಯಲ್ಲಿದ್ದ ಆರ್ ಸಿಬಿಗೆ ಬಲ ತುಂಬಲು ಬಂದ ಸ್ಟಾರ್ ವೇಗಿ ಡೇಲ್ ಸ್ಟೈನ್ ಗಾಯಗೊಂಡು ಮನೆಗೆ ಮರಳುವಂತಾಗಿದೆ.
									
										
								
																	
 
ಗಾಯಗೊಂಡಿದ್ದ ವೇಗಿ ನಥನ್ ಕರ್ಟ್ನರ್ ಸ್ಥಾನಕ್ಕೆ ಆರ್ ಸಿಬಿಗೆ ಬಂದಿದ್ದ ಸ್ಟೈನ್ ಎರಡೇ ಪಂದ್ಯವಾಡಿದ್ದರಷ್ಟೇ. ಇದರಲ್ಲಿ ನಾಲ್ಕು ವಿಕೆಟ್ ಕೂಡಾ ಕಬಳಿಸಿದ್ದರು. ಈಗ ಆರ್ ಸಿಬಿ ಕೊಂಚ ಚೇತರಿಕೆಯ ಹಾದಿಯಲ್ಲಿದ್ದು, ಆಗಲೇ ಈ ಆಘಾತಕಾರಿ ಸುದ್ದಿ ಸಿಕ್ಕಿದೆ.
									
			
			 
 			
 
 			
			                     
							
							
			        							
								
																	ಸ್ಟೈನ್ ಭುಜಕ್ಕೆ ಗಾಯ ಮಾಡಿಕೊಂಡಿದ್ದು, ಇದು ಅವರ ವಿಶ್ವಕಪ್ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಡುವೆ ಗಾಯಗೊಂಡಿದ್ದರು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ