Select Your Language

Notifications

webdunia
webdunia
webdunia
Friday, 11 April 2025
webdunia

ಐಸಿಸಿ ಮಾಸಿಕ ಆಟಗಾರ ಪ್ರಶಸ್ತಿ ಗೆದ್ದ ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್
ದುಬೈ , ಬುಧವಾರ, 10 ಮಾರ್ಚ್ 2021 (09:37 IST)
ದುಬೈ: ಫೆಬ್ರವರಿ ತಿಂಗಳ ಐಸಿಸಿ ಮಾಸಿಕ ಆಟಗಾರ ಪ್ರಶಸ್ತಿಯನ್ನು ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ.


ಜನವರಿಯಿಂದ ಐಸಿಸಿ ಪ್ರತೀ ತಿಂಗಳಿಗೊಮ್ಮೆ ಆಯಾ ತಿಂಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿ ಕೊಡುವ ಸಂಪ್ರದಾಯ ಆರಂಭಿಸಿದೆ. ಅದರಂತೆ ಜನವರಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಆಸ್ಟ್ರೇಲಿಯಾ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ಪ್ರಶಸ್ತಿ ಪಡೆದಿದ್ದರು.

ಇದೀಗ ಫೆಬ್ರವರಿ ತಿಂಗಳಲ್ಲೂ ಈ ಪ್ರಶಸ್ತಿ ಭಾರತದ ಪಾಲಾಗಿರುವುದು ವಿಶೇಷ. ಅಶ್ವಿನ್ ಇಂಗ್ಲೆಂಡ್ ವಿರುದ್ಧ ಆಲ್ ರೌಂಡರ್ ಪ್ರದರ್ಶನ ನೀಡಿ ಸರಣಿ ಗೆಲುವಿನ ರೂವಾರಿಯಾಗಿದ್ದರು. ಹೀಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಆಡುವ ಬಳಗದ ಆಯ್ಕೆಯೇ ದೊಡ್ಡ ತಲೆನೋವು