Publish Date: Wed, 07 Feb 2018 (09:37 IST)
Updated Date: Wed, 07 Feb 2018 (09:39 IST)
ಚೆನ್ನೈ: ಕಳೆದೊಂದು ವರ್ಷದಿಂದ ಸೀಮಿತ ಓವರ್ ಗಳ ಪಂದ್ಯದಲ್ಲಿ ಸ್ಥಾನ ಸಿಗದೇ, ಇತ್ತ ಟೆಸ್ಟ್ ಕ್ರಿಕೆಟ್ ನಲ್ಲೂ ಭಾರೀ ಯಶಸ್ಸು ಸಿಗದೇ ಸೊರಗಿರುವ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಲೆಗ್ ಸ್ಪಿನ್ ಕಲಿಯಲು ಹೊರಟಿದ್ದಾರೆ!
ವಿದೇಶಿ ಆಟಗಾರರು ಇತ್ತೀಚೆಗಿನ ದಿನಗಳಲ್ಲಿ ಆಫ್ ಸ್ಪಿನ್ ಸುಲಭವಾಗಿ ಆಡುತ್ತಿದ್ದಾರೆ. ಆದರೆ ಲೆಗ್ ಸ್ಪಿನ್ ಗೆ ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಜೋಡಿ ಯಶಸ್ವಿಯಾಗುತ್ತಿದೆ.
ಹೀಗೇ ಮುಂದುವರಿದರೆ ಮುಂದಿನ ವಿಶ್ವಕಪ್, ಟೆಸ್ಟ್ ಪಂದ್ಯಗಳಲ್ಲೂ ಸ್ಥಾನ ಕಳೆದುಕೊಳ್ಳಬೇಕಾದೀತು ಎಂಬ ಭಯದಿಂದ ಅಶ್ವಿನ್ ಕಷ್ಟವಾದರೂ ಲೆಗ್ ಸ್ಪಿನ್ ಕಲಿಯುತ್ತಿದ್ದಾರೆ. ಮುಂಬರುವ ಐಪಿಎಲ್ ನಲ್ಲಿ ಪಂಜಾಬ್ ಪರ ಆಡಲಿರುವ ಅಶ್ವಿನ್ ಲೆಗ್ ಸ್ಪಿನ್ ಮಾಡಲಿದ್ದಾರೆ. ಯಶಸ್ಸು ಎನ್ನುವುದು ಎಷ್ಟು ಚಂಚಲ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ