ಲಂಡನ್: ಗಾಯಾಳು ಶುಬ್ನಂ ಗಿಲ್ ಸ್ಥಾನಕ್ಕೆ ಬದಲಿಯಾಗಿ ಪೃಥ‍್ವಿ ಶಾ ಮತ್ತು ದೇವದತ್ತ್ ಪಡಿಕ್ಕಲ್ ರನ್ನು ಇಂಗ್ಲೆಂಡ್ ಗೆ ಕಳುಹಿಸಲು ನಿರಾಕರಿಸಿದ ಆಯ್ಕೆ ಸಮಿತಿ ಮೇಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಗಿಲ್ ಗಾಯಗೊಂಡರೆ ಈಗಾಗಲೇ ತಂಡದಲ್ಲಿ ಓಪನರ್ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್, ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್ ಇದ್ದಾರೆ. ಇವರನ್ನು ಬಳಸಿಕೊಳ್ಳಬಹುದು. ಬೇರೆ ಆಟಗಾರರು ಬೇಕಾಗಿಲ್ಲ ಎಂದು ಖಡಕ್ ಆಗಿ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಬೇಡಿಕೆಯನ್ನು ನಿರಾಕರಿಸಿದ್ದರು.
ಇದು ನಾಯಕ-ಕೋಚ್ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ರೀತಿ ಕೊಹ್ಲಿ-ಶಾಸ್ತ್ರಿ ಜೋಡಿಗೆ ಬಿಸಿಸಿಐ ಕಡೆಯಿಂದ ಮುಖಭಂಗವಾಗುತ್ತಿರುವುದು ಇದೇ ಮೊದಲು. ಹೀಗಾಗಿ ತಮ್ಮ ಬೇಡಿಕೆ ಈಡೇರದ ಬೇಸರ ಇಬ್ಬರಲ್ಲಿದೆ ಎನ್ನಲಾಗಿದೆ.