Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕೊಟ್ಟ ಬ್ಯಾಟ್ ಕಳ್ಳತನವಾದ ಕತೆ ಹೇಳಿದ ಅಫ್ಘನ್ ಕ್ರಿಕೆಟಿಗ ರಶೀದ್ ಖಾನ್

ವಿರಾಟ್ ಕೊಹ್ಲಿ ಕೊಟ್ಟ ಬ್ಯಾಟ್ ಕಳ್ಳತನವಾದ ಕತೆ ಹೇಳಿದ ಅಫ್ಘನ್ ಕ್ರಿಕೆಟಿಗ ರಶೀದ್ ಖಾನ್
ಲಂಡನ್ , ಭಾನುವಾರ, 2 ಜೂನ್ 2019 (09:17 IST)
ಲಂಡನ್: ಜಾಗತಿಕ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೆಂದರೆ ಎದುರಾಳಿ ತಂಡಗಳಲ್ಲೂ ಆರಾಧಕರಿದ್ದಾರೆ.


ಇದೇ ರೀತಿ ಅಫ್ಘಾನಿಸ್ತಾನ ತಂಡದ ಕ್ರಿಕೆಟಿಗ ರಶೀದ್ ಖಾನ್ ಕೂಡಾ ಕೊಹ್ಲಿ ಆರಾಧಕರೇ. ಹೀಗೇ ಒಮ್ಮೆ ರಶೀದ್ ಗೆ ಕೊಹ್ಲಿ ಒಂದು ಬ್ಯಾಟ್ ಗಿಫ್ಟ್ ಆಗಿ ಕೊಟ್ಟಿದ್ದರಂತೆ. ಆ ಬ್ಯಾಟ್ ನಲ್ಲಿ ಬ್ಯಾಟಿಂಗ್ ಮಾಡಿದ ರಶೀದ್ ಬೌಂಡರಿ, ಸಿಕ್ಸರ್ ಸಿಡಿಸಿದ್ದರಂತೆ.

ಈ ಬ್ಯಾಟ್ ನ ಮ್ಯಾಜಿಕ್ ನೋಡಿ ಅಂದು ಅಫ್ಘನ್ ನಾಯಕರಾಗಿದ್ದ ಅಸ್ಗರ್ ಅಫ್ಘನ್ ಆ ಬ್ಯಾಟ್ ನನಗೆ ಕೊಡು ಎಂದು ಕೇಳಿದರಂತೆ. ಆದರೆ ರಶೀದ್ ಆ ಬ್ಯಾಟ್ ಕೊಡಲು ಒಪ್ಪಿರಲಿಲ್ಲ. ಹೀಗಾಗಿ ಅಸ್ಗರ್, ರಶೀದ್ ಗೆ ಗೊತ್ತಾಗದಂತೇ ಆ ಬ್ಯಾಟ್ ಕದ್ದು ತಮ್ಮ ಬ್ಯಾಗ್ ಒಳಗೆ ಇಟ್ಟುಕೊಂಡರಂತೆ.

ಆದರೆ ಅದೇನು ದುರಾದೃಷ್ಟವೋ ಆ ಬ್ಯಾಟ್ ನಿಂದ ಅಸ್ಗರ್ ಗೆ ಹೇಳಿಕೊಳ್ಳುವ ರನ್ ಬರಲಿಲ್ಲ. ಹೀಗಾಗಿ ರಶೀದ್ ಗೆ ಮರಳಿ ನೀಡಿದರಂತೆ. ಅಂತೂ ತಮ್ಮ ಬ್ಯಾಟ್ ಮರಳಿದ ಖುಷಿ ರಶೀದ್ ರದ್ದಾಯಿತಂತೆ. ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಪಂದ್ಯಕ್ಕೆ ಮೊದಲು ಮಾನಸಿಕವಾಗಿ ಗಟ್ಟಿಯಾಗಲು ಕಾಡಿಗೆ ಹೋಗಿ ಟೀಂ ಇಂಡಿಯಾ ಮಾಡಿದ್ದೇನು?!