Select Your Language

Notifications

webdunia
webdunia
webdunia
webdunia

ಹೀನಾಯವಾಗಿ ಸೋತಿದ್ದಕ್ಕೆ ಪಾಕ್ ಕ್ರಿಕೆಟ್ ತಂಡವನ್ನು ಹೀಗೆಲ್ಲಾ ಕಾಲೆಳೆಯೋದಾ?!

ಹೀನಾಯವಾಗಿ ಸೋತಿದ್ದಕ್ಕೆ ಪಾಕ್ ಕ್ರಿಕೆಟ್ ತಂಡವನ್ನು ಹೀಗೆಲ್ಲಾ ಕಾಲೆಳೆಯೋದಾ?!
ಲಂಡನ್ , ಶನಿವಾರ, 1 ಜೂನ್ 2019 (09:32 IST)
ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯವಾಗಿ 7 ವಿಕೆಟ್ ಗಳಿಂದ ಸೋಲನುಭವಿಸಿ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗಿದೆ.


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಕೇವಲ 21.4 ಓವರ್ ಗಳಲ್ಲಿ 105 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಪಾಕ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಚುಟುಕು ಅವಧಿಯ ಇನಿಂಗ್ಸ್ ಆಗಿತ್ತು. ಕೇವಲ 111 ನಿಮಿಷಗಳಲ್ಲಿ ಪಾಕ್ ಇನಿಂಗ್ಸ್ ಕೊನೆಗೊಂಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ 13.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಈ ಹೀನಾಯ ಸೋಲಿನ ಬಳಿಕ ಟ್ವಿಟರ್ ನಲ್ಲಿ ಅಭಿಮಾನಿಗಳು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮೈದಾನ ತಲುಪಲೂ ಇದಕ್ಕಿಂತ ಹೆಚ್ಚು ಸಮಯ ಬೇಕಾಗಿತ್ತು ಎಂದು ಕೆಲವರು ಕಾಲೆಳೆದರೆ ಇನ್ನು ಕೆಲವರು ಮಳೆಯಾದರೂ ಬರಬಾರದಿತ್ತೇ ಎಂದಿದ್ದಾರೆ. ಇನ್ನು ಕೆಲವರು ಇದು ಟಿ20 ಕ್ರಿಕೆಟ್ ಅಲ್ಲ ಎಂದು ತಮ್ಮ ಕ್ರಿಕೆಟಿಗರಿಗೆ ನೆನಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಪಂದ್ಯದಲ್ಲೇ ಇತಿಹಾಸ ಬರೆದ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್