Select Your Language

Notifications

webdunia
webdunia
webdunia
Friday, 11 April 2025
webdunia

ಕಷ್ಟದ ಸಮಯದಲ್ಲಿ ನೆರವಾದ ರಾಹುಲ್ ದ್ರಾವಿಡ್ ನೆನೆದ ಕೆಎಲ್ ರಾಹುಲ್

ರಾಹುಲ್ ದ್ರಾವಿಡ್
ಲಂಡನ್ , ಗುರುವಾರ, 30 ಮೇ 2019 (09:51 IST)
ಲಂಡನ್: ಒಂದು ಹಂತದಲ್ಲಿ ಫಾರ್ಮ್ ಕಳೆದುಕೊಂಡು, ಖಾಸಗಿ ಶೋನ ಕಾಮೆಂಟ್ ನಿಂದಾಗಿಯೇ ಮಾನವೂ ಹೋಗಿ ತೀರಾ ಕುಗ್ಗಿ ಹೋಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಈಗ ಮರಳಿ ಲಯಕ್ಕೆ ಬಂದಿದ್ದಾರೆ.


ಬಾಂಗ್ಲಾದೇಶ ವಿರುದ್ಧ ಭರ್ಜರಿ ಶತಕ ಗಳಿಸಿದ ರಾಹುಲ್ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ ಅಂದು ತಾವು ತೀರಾ ಕುಗ್ಗಿ ಹೋಗಿದ್ದಾಗ ತಮಗೆ ನೆರವಾದ ರಾಹುಲ್ ದ್ರಾವಿಡ್ ರನ್ನು ನೆನೆಸಿಕೊಂಡಿದ್ದಾರೆ.

‘ನಾನು ಕಳಪೆ ಫಾರ್ಮ್ ನಿಂದ ತೀರಾ ಕುಗ್ಗಿ ಹೋಗಿದ್ದೆ. ಆಗ ನನಗೆ ಐಪಿಎಲ್, ಭಾರತ ಎ ತಂಡದ ಪರ ಆಡಲು ಅವಕಾಶ ಸಿಕ್ಕಿತು. ಎ ತಂಡದ ಪರವಾಗಿ ಆಡುವಾಗ ಕೋಚ್ ರಾಹುಲ್ ದ್ರಾವಿಡ್ ಜತೆಗೆ ನನ್ನ ಟೆಕ್ನಿಕ್ ಮತ್ತು ಮಾನಸಿಕವಾಗಿ ತೀರಾ ಕುಗ್ಗಿ ಹೋದ ಸ್ಥಿತಿಯಿಂದ ಸುಧಾರಿಸುವುದು ಹೇಗೆಂದು ಕಲಿತುಕೊಂಡೆ. ದ್ರಾವಿಡ್ ಸರ್ ನನಗೆ ಮರಳಿ ಲಯ ಕಂಡುಕೊಳ್ಳಲು ಸಹಾಯ ಮಾಡಿದರು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಜತೆ ತನ್ನ ರಿಲೇಷನ್ ಶಿಪ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸೋನಲ್ ಚೌಹಾನ್