Publish Date: Wed, 29 May 2019 (11:50 IST)
Updated Date: Wed, 29 May 2019 (11:52 IST)
ಲಂಡನ್: ಮೈದಾನದಲ್ಲಿ ಧೋನಿ ಮಾಡದೇ ಇರುವ ಕೆಲಸ ಇನ್ನೇನಾದರೂ ಇದೆಯೇ? ಬಾಂಗ್ಲಾದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಧೋನಿ ಎದುರಾಳಿಗಳಿಗೆ ಫೀಲ್ಡಿಂಗ್ ಸೆಟ್ ಮಾಡಲೂ ಸಹಾಯ ಮಾಡಿದ ಘಟನೆ ನಡೆದಿದೆ!
ಇದನ್ನು ನೋಡಿ ನೆಟ್ಟಿಗರು ಧೋನಿ ಬಗ್ಗೆ ಈ ಮನುಷ್ಯ ಇನ್ನೇನು ಮಾಡ್ತಾರೋ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
ಧೋನಿ ಮತ್ತು ಕೆಎಲ್ ರಾಹುಲ್ ಜೋಡಿಯ ಭರ್ಜರಿ ಬ್ಯಾಟಿಂಗ್ ನಿಂದ ಬಾಂಗ್ಲಾ ನಾಯಕ ಫೀಲ್ಡಿಂಗ್ ಸೆಟ್ ಮಾಡಲು ಪರದಾಡುತ್ತಿದ್ದಾಗ ಸ್ವತಃ ಧೋನಿ ಫೀಲ್ಡಿಂಗ್ ಸೆಟ್ ಮಾಡಲು ಸಹಾಯ ಮಾಡಿದ್ದಾರೆ! ಎದುರಾಳಿಗಳಿಗೂ ಸಹಾಯ ಮಾಡುವ ಧೋನಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.