Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುತ್ತಾರಂತೆ ಕ್ರಿಕೆಟಿಗ ಕೇದಾರ್ ಜಾಧವ್!

ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುತ್ತಾರಂತೆ ಕ್ರಿಕೆಟಿಗ ಕೇದಾರ್ ಜಾಧವ್!
ಮುಂಬೈ , ಬುಧವಾರ, 29 ಮೇ 2019 (08:22 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್ ಇದೀಗ ವಿಶ್ವಕಪ್ ಕ್ರಿಕೆಟ್ ನಲ್ಲಿ ಬ್ಯುಸಿ. ಈ ನಡುವೆ ಅವರು ಬಾಲಿವುಡ್ ಗೆ ಕಾಲಿಡಲಿದ್ದಾರೆ ಎಂಬ ಸುಳಿವನ್ನು ಸಹ ಕ್ರಿಕೆಟಿಗ ರೋಹಿತ್ ಶರ್ಮಾ ನೀಡಿದ್ದಾರೆ.


ವಿಡಿಯೋ ಸಂದೇಶವೊಂದನ್ನು ಪ್ರಕಟಿಸಿರುವ ರೋಹಿತ್ ತಮ್ಮ ಜತೆಗಿರುವ ಕೇದಾರ್ ಜಾಧವ್ ರನ್ನು ಪರಿಚಯಿಸುತ್ತಾ ನನ್ನ ಪಕ್ಕದಲ್ಲಿರುವವರು ರೇಸ್ 4 ಸಿನಿಮಾದ ನಟರು ಎನ್ನುತ್ತಾರೆ. ಈ ಬಗ್ಗೆ ಕೇದಾರ್ ಕೂಡಾ ಹೌದು ಮಾತುಕತೆ ಹಂತದಲ್ಲಿದೆಯಷ್ಟೇ, ಫೈನಲ್ ಆಗಿಲ್ಲ ಎನ್ನುತ್ತಾರೆ.

ಆದರೆ ಕೇದಾರ್ ನಿಜವಾಗಿಯೂ ಸಿನಿಮಾದಲ್ಲಿ ನಟಿಸುತ್ತಾರಾ ಅಥವಾ ರೋಹಿತ್ ಜತೆ ಸೇರಿಕೊಂಡು ತಮಾಷೆ ಮಾಡಿದರಾ ಗೊತ್ತಿಲ್ಲ. ಚಿತ್ರತಂಡವಂತೂ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆ ಮೊದಲು ಅಪಾಯ ಮೈಮೇಲೆಳೆದುಕೊಂಡ ಹಾರ್ದಿಕ್ ಪಾಂಡ್ಯ