Publish Date: Thu, 30 May 2019 (09:39 IST)
Updated Date: Thu, 30 May 2019 (09:41 IST)
ಲಂಡನ್: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ಕ್ರಿಕೆಟ್ ವಿಚಾರಕ್ಕೆ ಬಂದರೆ ಮಿಸ್ಟರ್ ಪರ್ಫೆಕ್ಷನಿಸ್ಟ್. ಆದರೆ ಈ ವಿಚಾರದಲ್ಲಿ ಮಾತ್ರ ಅತೀ ಕೆಟ್ಟದಾಗಿ ಮಾಡುತ್ತಾರಂತೆ!
ಅದೇನು ಅಂತ ಸಹ ಕ್ರಿಕೆಟಿಗ ರವೀಂದ್ರ ಜಡೇಜಾ ಬಹಿರಂಗಪಡಿಸಿದ್ದಾರೆ. ಧೋನಿ ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್. ಆದರೆ ನೃತ್ಯ ಮಾಡುವ ವಿಚಾರಕ್ಕೆ ಬಂದರೆ ಅವರಷ್ಟು ಕೆಟ್ಟ ನೃತ್ಯಗಾರ ಎಂದಿದ್ದಾರೆ.
ಇನ್ನು, ಉಪ ನಾಯಕ ರೋಹಿತ್ ಶರ್ಮಾಗೆ ಕಾಫಿ ಗೀಳು ಇದೆ ಮತ್ತು ಅವರು ಯಾವತ್ತೂ ಟೀಂ ಬಸ್ ಗೆ ತಡವಾಗಿಯೇ ಬರುವ ಅಸಾಮಿ ಎಂದು ಜಡೇಜಾ ಹೇಳಿದ್ದಾರೆ. ಇನ್ನು, ಜಸ್ಪ್ರೀತ್ ಬುಮ್ರಾಗೆ ರೊಮ್ಯಾಂಟಿಕ್ ಕಾಮೆಡಿ ಸಿನಿಮಾಗಳೆಂದರೆ ಇಷ್ಟವಂತೆ.