Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್ 2019: ಮೊದಲ ಪಂದ್ಯದಲ್ಲೇ ಗಮನ ಸೆಳೆದ ಬೆನ್ ಸ್ಟೋಕ್ಸ್ ಶೋ

ವಿಶ್ವಕಪ್ ಕ್ರಿಕೆಟ್ 2019
ದಿ ಓವಲ್ , ಶುಕ್ರವಾರ, 31 ಮೇ 2019 (09:47 IST)
ದಿ ಓವಲ್: ವಿಶ್ವಕಪ್ ಕ್ರಿಕೆಟ್ 2019 ರ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ದ.ಆಫ್ರಿಕಾ ವಿರುದ್ಧ 104 ರನ್ ಗಳ ಗೆಲುವು ಕಂಡಿದೆ.


ಎಲ್ಲಕ್ಕಿಂತ ಹೆಚ್ಚು ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಬೆನ್ ಸ್ಟೋಕ್ಸ್. ಬ್ಯಾಟಿಂಗ್ ನಲ್ಲಿ 79 ಎಸೆತಗಳಲ್ಲಿ 89 ರನ್ ಬಾರಿಸಿದ್ದ ಬೆನ್ ಬಳಿಕ ಫೀಲ್ಡಿಂಗ್ ವೇಳೆ 2 ವಿಕೆಟ್ ಕಿತ್ತಿದ್ದಲ್ಲದೆ, ಒಂದು ಅದ್ಭುತ ಕ್ಯಾಚ್ ಪಡೆದಿದ್ದರು. ಬೆನ್ ಸ್ಟೋಕ್ಸ್ ಬೌಂಡರಿ ಲೈನ್ ಬಳಿ ಪಡೆದ ಈ ಕ್ಯಾಚ್ ನ್ನು ಐಸಿಸಿ ಶತಮಾನದ ಕ್ಯಾಚ್ ಎಂದು ಕೊಂಡಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 311 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಫ್ರಿಕಾ ಬ್ಯಾಟ್ಸ್ ಮನ್  ಗಳು ಆರಂಭದಲ್ಲೇ ಎಡವಿದರು. ಕ್ವಿಂಟನ್ ಡಿ ಕಾಕ್ 68 ಮತ್ತು ವಾನ್ ಡೆರ್ ಡ್ಯುಸೆನ್ 50 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಹೀಗಾಗಿ ಆಫ್ರಿಕಾ 39.5 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಮೂಲಕ ಮತ್ತೊಂದು ಇನಿಂಗ್ಸ್ ಶುರು ಮಾಡಿದ ಸಚಿನ್ ತೆಂಡುಲ್ಕರ್!