Publish Date: Fri, 31 May 2019 (09:55 IST)
Updated Date: Fri, 31 May 2019 (09:57 IST)
ದಿ ಓವಲ್: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದ.ಆಫ್ರಿಕಾ ಬೌಲರ್ ಇಮ್ರಾನ್ ತಾಹಿರ್ ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆಫ್ರಿಕಾ ಮೊದಲು ಫೀಲ್ಡಿಂಗ್ ಮಾಡಿತ್ತು. ನಾಯಕ ಫಾ ಡು ಪ್ಲೆಸಿಸ್ ಮೊದಲ ಓವರ್ ನನ್ನೇ ಸ್ಪಿನ್ನರ್ ಇಮ್ರಾನ್ ತಾಹಿರ್ ಗೊಪ್ಪಿಸಿದರು. ಈ ಮೂಲಕ ಇಮ್ರಾನ್ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪಿನ್ನರ್ ಓಪನಿಂಗ್ ಬೌಲಿಂಗ್ ಮಾಡಿದ ದಾಖಲೆಗೆ ಪಾತ್ರರಾದರು.
ನಾಯಕನ ಭರವಸೆ ಉಳಿಸಿಕೊಂಡ ಇಮ್ರಾನ್ ಮೊದಲ ಓವರ್ ನಲ್ಲೇ ಇಂಗ್ಲೆಂಡ್ ನ ಬೇರ್ ಸ್ಟೋ ವಿಕೆಟ್ ಉಡಾಯಿಸಿ ಸಂಭ್ರಮಿಸಿದರು.