Publish Date: Tue, 31 Oct 2017 (10:01 IST)
Updated Date: Tue, 31 Oct 2017 (10:03 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಂತೆ ಆಗಬೇಕೆಂದು ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಕೆಟಿಗರೆಲ್ಲಾ ಕನಸು ಕಾಣುತ್ತಿರಬೇಕಾದರೆ ‘ವಾಲ್’ ಖ್ಯಾತಿ ರಾಹುಲ್ ದ್ರಾವಿಡ್ ಕುರುಡರಂತೆ ಅವರನ್ನು ಹಿಂಬಾಲಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಮೈದಾನದಲ್ಲಿ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ವರ್ತನೆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ‘ಮೈದಾನದಲ್ಲಿ ಅಲ್ಪ ಸ್ವಲ್ಪ ಅಗ್ರೆಸಿವ್ ನೆಸ್ ಬೇಕು. ಆದರೆ ಕೊಹ್ಲಿ ಪ್ರತೀ ಸರಣಿಗೆ ಮೊದಲು ನೀಡುವ ಹೇಳಿಕೆಗಳನ್ನು ನೋಡಿದರೆ ನನಗೆ ಭಯವಾಗುತ್ತದೆ. ಆತ ಅದಕ್ಕೆ ಸರಿಯಾಗಿ ಫಲಿತಾಂಶವನ್ನೂ ನೀಡಿದರೆ ಇಂತಹ ಹೇಳಿಕೆಗಳು ನಡೆಯುತ್ತದೆ’ ಎಂದು ದ್ರಾವಿಡ್ ಹೇಳಿದ್ದಾರೆ.
ಕೊಹ್ಲಿ ಫ್ಯಾಶನ್, ಟ್ಯಾಟೂಗಳನ್ನು ಹಿಂಬಾಲಿಸುತ್ತಿರುವ ಯುವ ಕ್ರಿಕೆಟಿಗರಿಗೆ ಕಿವಿ ಮಾತು ಹೇಳಿದ ದ್ರಾವಿಡ್ ‘ಕಣ್ಣು ಮುಚ್ಚಿಕೊಂಡು ಅವರು ಮಾಡುವುದೆಲ್ಲವನ್ನೂ ನೀವು ಅನುಕರಿಸಲು ಹೋಗಬೇಡಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ