Publish Date: Mon, 30 Oct 2017 (16:05 IST)
Updated Date: Mon, 30 Oct 2017 (16:07 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸುವ ವೇಗ ನೋಡಿ ಅವರನ್ನು ಸಚಿನ್ ತೆಂಡುಲ್ಕರ್ ಗೆ ಹೋಲಿಸಲಾಗುತ್ತಿದೆ. ಆದರೆ ಅದೇ ಕ್ರಿಕೆಟ್ ದೇವರನ್ನೂ ಕೊಹ್ಲಿ ಮೀರಿದ್ದಾರೆ.
ಐಸಿಸಿ ಜೀವನ ಶ್ರೇಷ್ಠ ರ್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಸಚಿನ್ ತೆಂಡುಲ್ಕರ್ ರನ್ನೂ ಮೀರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 32 ನೇ ಶತಕ ದಾಖಲಿಸಿದ ಕೊಹ್ಲಿ ಇದೀಗ ಏಕದಿನ ಪಂದ್ಯದಲ್ಲಿ ನಂ. ಸ್ಥಾನವನ್ನು ಮರಳಿ ಪಡೆದಿದ್ದಾರೆ.
ಅಷ್ಟೇ ಅಲ್ಲದೆ, ಜೀವನ ಶ್ರೇಷ್ಠ ರ್ಯಾಂಕಿಂಗ್ ನಲ್ಲಿ 889 ಅಂಕ ಪಡೆಯುವ ಮೂಲಕ ಸಚಿನ್ ತೆಂಡುಲ್ಕರ್ ರನ್ನು ಹಿಂದಿಕ್ಕಿದ್ದಾರೆ. ಸಚಿನ್ 887 ಅಂಕ ಹೊಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ