Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಚಪಡಿಸುತ್ತಿದ್ದರೆ, ಧೋನಿ ನಗುತ್ತಿದ್ದರು!

ವಿರಾಟ್ ಕೊಹ್ಲಿ ಚಪಡಿಸುತ್ತಿದ್ದರೆ, ಧೋನಿ ನಗುತ್ತಿದ್ದರು!
ಕಾನ್ಪುರ , ಸೋಮವಾರ, 30 ಅಕ್ಟೋಬರ್ 2017 (08:26 IST)
ಕಾನ್ಪುರ: ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತ ಮತ್ತೊಮ್ಮೆ ಗೆಲುವಿನ ಬಾಯಿಯವರೆಗೆ ಬಂದು ಸೋಲುತ್ತದೆ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.ಆದರೆ ಕೊನೆ ಗಳಿಗೆಯಲ್ಲಿ ಬಿಗು ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಭಾರತಕ್ಕೆ ಗೆಲುವು ದಾಖಲಿಸಿಕೊಟ್ಟರು.

 
ಅಪರೂಪಕ್ಕೆ ತವರಿನಲ್ಲಿ ಸರಣಿ ಸೋಲಿನ ಅವಮಾನಕ್ಕೆ ಗುರಿಯಾಗುವ ಎಲ್ಲಾ ಲಕ್ಷಣಗಳಿತ್ತು. ಗೆಲುವಿಗೆ 338 ರನ್ ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ಆತ್ಮವಿಶ್ವಾಸದಿಂದಲೇ ಗೆಲುವಿನ ಸಮೀಪ ಬಂದು ನಿಂತಿದ್ದರು.

ಕೊನೆಯ ಎರಡು ಓವರ್ ಗಳಲ್ಲಿ 19 ರನ್ ಬೇಕಾಗಿದ್ದಾಗ ಕೊಹ್ಲಿ ಬೌಂಡರಿ ಗೆರೆ ಬಳಿ ನಿಂತು ಚಡಪಡಿಸುತ್ತಿದ್ದರು. ಅವರ ಮುಖದಲ್ಲಿ ಹಾವಭಾವದಲ್ಲಿ ಒತ್ತಡ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ವಿಕೆಟ್ ಹಿಂದುಗಡೆಯಿದ್ದ ಧೋನಿ ಎಂದಿನಂತೆ ಶಾಂತರಾಗಿದ್ದರು.

ನಗು ನಗುತ್ತಲೇ ಬೌಲರ್ ಗಳನ್ನು ಹುರಿದುಂಬಿಸಿದರು. ಅಂತಿಮ ಓವರ್ ಗೆ ಫೀಲ್ಡಿಂಗ್ ಸೆಟ್ ಮಾಡಿ ತಾವೇ ನಾಯಕನ ಪಾತ್ರ ವಹಿಸಿದರು. ಕೊನೆಯ ಓವರ್ ನ ಎರಡು ಎಸೆತಗಳಲ್ಲಿ 12 ರನ್ ಬೇಕಾಗಿದ್ದಾಗಲೂ ಕೊಹ್ಲಿ ಮುಖದಲ್ಲಿ ನಗುವಿರಲಿಲ್ಲ.

ಆದರೆ ಐದನೇ ಎಸೆತದಲ್ಲಿ ಕೀವೀಸ್ ಬ್ಯಾಟ್ಸ್ ಮನ್ ಸಿಂಗಲ್ ರನ್ ತೆಗೆದಾಗ ಅಂತಿಮ ಎಸೆತದಲ್ಲಿ 11 ರನ್ ಗಳಿಸುವ ಅಸಾಧ್ಯ  ಗುರಿ ಅವರದಾಯಿತು. ಆಗಲಷ್ಟೇ ಕೊಹ್ಲಿ ಸಹಜ ಸ್ಥಿತಿಗೆ ಬಂದರು. ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿದರೂ ಕೀವೀಸ್ 7 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊಹ್ಲಿ ಖುಷಿಯಿಂದಲೇ ಓಡಿ ಬಂದು ತಮ್ಮ ಯುವ ಬೌಲರ್ ಗಳನ್ನು ಅಪ್ಪಿಕೊಂಡರು. ಧೋನಿ ಮೊದಲಿನಷ್ಟೇ ಶಾಂತರಾಗಿದ್ದರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷದ ಐಪಿಎಲ್ ನಲ್ಲಿ ದುಬಾರಿಯಾಗಲಿದ್ದಾರಾ ಹಾರ್ದಿಕ್ ಪಾಂಡ್ಯ