Publish Date: Tue, 31 Oct 2017 (08:52 IST)
Updated Date: Tue, 31 Oct 2017 (08:53 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ರನ್ನೂ ಟ್ವಿಟರ್ ವಿಡಂಬನಕಾರರು ಕಾಲೆಳೆಯುವುದನ್ನು ಬಿಟ್ಟಿಲ್ಲ ಎನ್ನುವುದಕ್ಕೆ ಲೇಟೆಸ್ಟ್ ಉದಾಹರಣೆ ಈ ಘಟನೆ.
ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ ಸಚಿನ್ ತೆಂಡುಲ್ಕರ್ ಅಭಿನಂದಿಸುವಾಗ ಕೊಂಚ ತಡವಾಗಿದ್ದೇ ಟ್ವಿಟರಿಗರ ತಮಾಷೆಗೆ ಕಾರಣರಾದರು. ‘ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಈ ಪಂದ್ಯದಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಬಹುದು’ ಎಂದು ಸಚಿನ್ ಟ್ವೀಟ್ ಮಾಡಿದ್ದರು.
ಇಷ್ಟು ಮಾಡಿದರೆ ತಮಾಷೆ ಮಾಡುವುದೇಕೆ ಎಂದು ನೀವು ಕೇಳಬಹುದು. ಆದರೆ ಸಚಿನ್ ಇಂತಹದ್ದೊಂದು ಸಂದೇಶ ಹಾಕಿರುವುದು ಪಂದ್ಯ ಮುಗಿದ ಮರುದಿನ. ಅಂದರೆ ಸೋಮವಾರ! ಅಷ್ಟೇ ಸಾಕಾಯಿತು ನೋಡಿ.
ಸಚಿನ್ ತೆಂಡುಲ್ಕರ್ ರನ್ನು ಅಭಿಮಾನಿಗಳು ಹಿಗ್ಗಾ ಮುಗ್ಗಾ ತಮಾಷೆ ಮಾಡಿದ್ದಾರೆ. ಮುಂದಿನ ವರ್ಷದ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಕೆಲವರು ಕೇಳಿದರೆ, ಮೊದಲು ನಿಮ್ಮ ಸೆಟ್ ಆಫ್ ಬ್ಯಾಕ್ಸ್ ಚೇಂಜ್ ಮಾಡಿ ಎಂದು ಪುಕ್ಸಟೆ ಸಲಹೆ ನೀಡಿದ್ದಾರೆ. ನೀವೇನಾದ್ರೂ ರಿಪೀಟ್ ಟೆಲಿಕಾಸ್ಟ್ ನೋಡಿ ಈ ಸಂದೇಶ ಹಾಕುತ್ತಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಅಂತೂ ಕ್ರಿಕೆಟ್ ದೇವರು ಏನೋ ಹೇಳಲು ಹೋಗಿ ನಗೆಪಾಟಲಿಗೀಡಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ