Publish Date: Sun, 16 Aug 2020 (12:34 IST)
Updated Date: Sun, 16 Aug 2020 (12:37 IST)
ರಾಂಚಿ: ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರ ಅಭಿಮಾನಿಗಳು, ಸಹ ಕ್ರಿಕೆಟಿಗರಿಂದ ವಿವಿಧ ಬೇಡಿಕೆ ಬರುತ್ತಿದೆ.
ಧೋನಿ ತವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಧೋನಿಗೆ ವಿದಾಯ ಪಂದ್ಯವೇರ್ಪಡಿಸಿ ಅವರನ್ನು ಗೌರವಯುತವಾಗಿ ಬೀಳ್ಕೊಡಿ ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಇತ್ತ ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಧೋನಿ ಧರಿಸುತ್ತಿದ್ದ ಜೆರ್ಸಿ ನಂ.7 ನ್ನು ಶಾಶ್ವತವಾಗಿ ನಿವೃತ್ತಿ ಮಾಡಿ. ಈ ಮೊದಲು ಸಚಿನ್ ತೆಂಡುಲ್ಕರ್ ಗೌರವಾರ್ಥ ಅವರು ತೊಡುತ್ತಿದ್ದ 10 ನಂ. ಜೆರ್ಸಿಗೂ ವಿದಾಯ ನೀಡಲಾಗಿತ್ತು. ಇನ್ನು ಮುಂದೆ ಆ ನಂಬರ್ ಜೆರ್ಸಿ ಯಾರಿಗೂ ಕೊಡಲಾಗುವುದಿಲ್ಲ. ಈಗ ಧೋನಿಗೂ ಹಾಗೇ ಗೌರವ ಸಲ್ಲಿಸಿ ಎಂದು ಆಗ್ರಹಿಸಿದ್ದಾರೆ.