Publish Date: Wed, 03 Apr 2019 (09:49 IST)
Updated Date: Wed, 03 Apr 2019 (09:51 IST)
ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ಧುಲ್ಲಾ ಮಾಡಿದ ಕಾಮೆಂಟ್ ಒಂದಕ್ಕೆ ಲೇವಡಿ ಮಾಡಿ ಟ್ವೀಟ್ ಮಾಡಿದ್ದರು. ಅದಕ್ಕೀಗ ಒಮರ್ ಅಬ್ಧುಲ್ಲಾ ತಿರುಗೇಟು ನೀಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಒಮರ್ ಅಬ್ಧುಲ್ಲಾ ಕಾಮೆಂಟ್ ಮಾಡಿದ್ದಕ್ಕೆ ಪ್ರಧಾನಿ ಮೋದಿ ಕೂಡಾ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೂಡಾ ಟ್ವೀಟ್ ಮಾಡಿ ‘ಒಮರ್ ಅಬ್ಧುಲ್ಲಾಗೆ ಬೇಕಿರುವುದು ಪ್ರತ್ಯೇಕ ಪ್ರಧಾನಿಯಲ್ಲ. ಒಂದು ಸ್ಟ್ರಾಂಗ್ ಕಾಫಿ ಕೊಟ್ಟು ದೀರ್ಘ ನಿದ್ರೆ ಮಾಡಲಿ. ಆಗ ಸರಿಹೋಗುತ್ತಾರೆ. ಆಗಲೂ ಅವರಿಗೆ ಅರ್ಥವಾಗದಿದ್ದೆ ಪಾಕಿಸ್ತಾನದ ಪಾಸ್ ಪೋರ್ಟ್ ಪಡೆಯಲಿ’ ಎಂದು ಗಂಭೀರ್ ಲೇವಡಿ ಮಾಡಿದ್ದರು.
ಇದಕ್ಕೆ ಈಗ ಒಮರ್ ಅಬ್ಧುಲ್ಲಾ ‘ನನಗೆ ಕ್ರಿಕೆಟ್ ಗೊತ್ತಿಲ್ಲ. ಅದಕ್ಕೆ ನಾನು ಆಡಿಲ್ಲ. ಹಾಗೆಯೇ ಮಿಸ್ಟರ್ ಗೌತಮ್ ಗಂಭೀರ್ ನಿಮಗೆ ಏನು ಗೊತ್ತಿದೆಯೋ ಅಷ್ಟನ್ನು ಮಾಡಿಕೊಂಡು ಹೋಗಿ. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಜಮ್ಮು ಕಾಶ್ಮೀರ ವಿಚಾರದ ಬಗ್ಗೆಯೆಲ್ಲಾ ಮಾತನಾಡಬೇಡಿ’ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ