Publish Date: Tue, 02 Apr 2019 (07:31 IST)
Updated Date: Tue, 02 Apr 2019 (14:35 IST)
ಬೆಂಗಳೂರು: ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ವರನಟ ಡಾ. ರಾಜ್ ಕುಮಾರ್ ಬಗ್ಗೆ ನಟಿ, ಬಿಜೆಪಿ ನಾಯಕಿ ತಾರಾ ನೀಡಿದ ಹೇಳಿಕೆಯೊಂದು ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯಕ್ಕೆ ರಾಜ್ ಕುಮಾರ್ ಇದ್ದಂತೆ ದೇಶಕ್ಕೆ ಪ್ರಧಾನಿ ಮೋದಿ ಮಹಾನ್ ನಾಯಕ ಎಂದು ನಟಿ ತಾರಾ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಹೊಗಳಿದ್ದರು.
ಆದರೆ ಇದು ರಾಜ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರಾಜ್ ಕುಮಾರ್ ಕುಟುಂಬ ರಾಜಕಾರಣದಿಂದ ದೂರವಿದೆ. ವಿನಾಕಾರಣ ನಿಮ್ಮ ರಾಜಕೀಯ ತೆವಲುಗಳಿಗೆ ರಾಜ್ ಹೆಸರನ್ನು ಯಾಕೆ ಎಳೆದುತರುತ್ತೀರಾ? ರಾಜ್ ಕುಮಾರ್ ಅವರಿಗೆ ನಿಮ್ಮ ಯಾವ ರಾಜಕೀಯ ನಾಯಕರೂ ಸಮರಾಗಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ