Publish Date: Tue, 02 Apr 2019 (06:31 IST)
Updated Date: Tue, 02 Apr 2019 (14:36 IST)
ಚಿಕ್ಕಬಳ್ಳಾಪುರ : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗೆದ್ದೇ ಗೆಲ್ತಾನೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ ಸುಧಾಕರ್ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಗ್ರಾಮದಲ್ಲಿ ವೀರಪ್ಪಮೊಯ್ಲಿ ಪರ ಚುನಾವಣಾ ಪ್ರಚಾರ ನಡೆಸಲು ಪೂರ್ವ ಭಾವಿಯಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸುಧಾಕರ್ ಈ ಮಾತನ್ನು ಹೇಳಿದ್ದಾರೆ.
ಬಿಜೆಪಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಒಬ್ಬ ಹುಡುಗನಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಈ ಮಾತನ್ನು ಹೇಳಬಾರದು ಅದರೂ ಹೇಳುತ್ತಿದ್ದೇನೆ. ಅಲ್ಲಿ ತೇಜಸ್ವಿ ಸೂರ್ಯ ಗೆಲ್ತಾನೆ. ಆದರೆ ಅವನು ಅವನ ಮುಖದಿಂದ ಗೆಲ್ಲಲ್ಲ. ಆ ಕ್ಷೇತ್ರದಲ್ಲಿ ಸೂರ್ಯ ನಿಲ್ಲಿಸಲಿ, ಚಂದ್ರ ನಿಲ್ಲಿಸಲಿ ಬಿಜೆಪಿ ಪಕ್ಷದ ಖದರ್ ನಿಂದ ತೇಜಸ್ವಿ ಸೂರ್ಯ ಗೆಲ್ತಾನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.