Publish Date: Tue, 02 Apr 2019 (06:02 IST)
Updated Date: Tue, 02 Apr 2019 (06:04 IST)
ಜೈಪುರ: ಇದುವರೆಗೆ ಈ ಆವೃತ್ತಿಯ ಐಪಿಎಲ್ ನಲ್ಲಿ ಒಂದೇ ಒಂದು ಜಯಗಳಿಸದೆ ಹ್ಯಾಟ್ರಿಕ್ ಸೋಲುಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ರಾಜಸ್ಥಾನ್ ರಾಯಲ್ಸ್ ಎದುರಾಳಿ.
ರಾಜಸ್ಥಾನ್ ಕೂಡಾ ಇದುವರೆಗೆ ನಡೆದ ಪಂದ್ಯದಲ್ಲಿ ಆರ್ ಸಿಬಿಯಷ್ಟು ಹೀನಾಯ ಪ್ರದರ್ಶನವಲ್ಲದಿದ್ದರೂ ಪ್ರಬಲ ತಂಡ ಎನಿಸಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹೀಗಾಗಿ ಮೊದಲ ಜಯ ಗಳಿಸಲು ಕೊಹ್ಲಿ ಪಡೆಗೆ ಇದು ಸುವರ್ಣಾವಕಾಶ.
ಒಂದು ವೇಳೆ ಇಂದು ಸೋತರೆ ಕೊಹ್ಲಿ ಮತ್ತು ಟೀಂ ಮಾನ ಮೂರು ಕಾಸಿಗೆ ಹರಾಜಾಗಲಿದೆ. ಈಗಾಗಲೇ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಮೂರೂ ವಿಭಾಗದಲ್ಲಿ ದಯನೀಯ ವೈಫಲ್ಯ ಕಂಡಿರುವ ಆರ್ ಸಿಬಿ ಆಟಗಾರರು ಇಂದು ತಮ್ಮ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಒಂದೆಡೆ ಅಭಿಮಾನಿಗಳ ಟೀಕೆ, ಇನ್ನೊಂದೆಡೆ ಪ್ರತಿಷ್ಠೆಯ ಪ್ರಶ್ನೆ ಮತ್ತೊಂದೆಡೆ ಫಾರ್ಮ್ ಕಂಡುಕೊಳ್ಳುವ ಅನಿವಾರ್ಯತೆ, ಇವೆಲ್ಲವನ್ನೂ ಕೊಹ್ಲಿ ಪಡೆ ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ