Publish Date: Tue, 02 Apr 2019 (05:53 IST)
Updated Date: Tue, 02 Apr 2019 (05:55 IST)
ಬೆಂಗಳೂರು: ಆರ್ ಸಿಬಿ ಪರ ಐಪಿಎಲ್ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಮಾಡಿರುವವ ಪ್ರಯಾಸ್ ರೇ ಬರ್ಮನ್ ಗೆ ಈಗ ದ್ವಿತೀಯ ಪಿಯುಸಿ ಪರೀಕ್ಷೆ ಬಿಸಿ!
ಐಪಿಎಲ್ ಜತೆಗೆ ಈ ಯುವ ಕ್ರಿಕೆಟಿಗ ಸಿಬಿಎಸ್ ಇ ಬೋರ್ಡ್ ದ್ವಿತೀಯ ಪಿಯುಸಿ ಪರೀಕ್ಷೆಗೂ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಓದು ಮತ್ತು ಆಟ ಎರಡನ್ನೂ ಮ್ಯಾನೇಜ್ ಮಾಡುವುದು ಈ ಯುವ ಕ್ರಿಕೆಟಿಗನಿಗೆ ಸವಾಲಾಗಿದೆ.
ಕೋಲ್ಕೊತ್ತಾದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಯಾಸ್ ಭಾನುವಾರದ ಪಂದ್ಯ ಮುಗಿದ ತಕ್ಷಣ ತವರಿಗೆ ತೆರಳಿದ್ದು, ಪರೀಕ್ಷೆಗೆ ಹಾಜರಾಗಿದ್ದಾರೆ. ಮತ್ತೆ ಇಂದಿನ ಪಂದ್ಯಕ್ಕೆ ತಂಡವನ್ನು ಕೂಡಿಕೊಂಡು ನಾಳೆ ನಡೆಯಲಿರುವ ಮತ್ತೊಂದು ಪರೀಕ್ಷೆಗೆ ಪ್ರಯಾಸ್ ಕೋಲ್ಕೊತ್ತಾಕ್ಕೆ ತೆರಳಬೇಕಿದೆ. ಆತನಿಗೆ ಇದು ಕಷ್ಟವಾಗುತ್ತಿದೆ. ಹಾಗಿದ್ದರೂ ತಂಡದ ಬೆಂಬಲ ಅವನಿಗಿರುವುದರಿಂದ ನಿಭಾಯಿಸುತ್ತಿದ್ದಾನೆ ಎಂದು ಪ್ರಯಾಸ್ ತಂದೆ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ