Publish Date: Tue, 02 Apr 2019 (17:12 IST)
Updated Date: Tue, 02 Apr 2019 (17:15 IST)
ಚುನಾವಣೆಯಲ್ಲಿ ಮತ ಸೆಳೆಯೋಕೆ ಅಂತ ಬಿಜೆಪಿ ಅಭ್ಯರ್ಥಿಯೊಬ್ಬರು ಪಾರ್ಕ್ ನಲ್ಲಿ ರನ್ ಮಾಡಿದ್ದಾರೆ.
ತೇಜಸ್ವಿ ಸೂರ್ಯನಿಂದ ಪಾರ್ಕ್ ರನ್ ಮಾಡಿದ್ದಾರೆ. ಬೆಂಗಳೂರಿನ ಹೆಚ್.ಎಸ್.ಆರ್.ಬಡಾವಣೆಯ ಪ್ರೀಡಂ ಪಾರ್ಕ್ ನಲ್ಲಿ ಮತಯಾಚಿಸಿದರು. ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ವಾಕಿಂಗ್ ಬಂದವರಲ್ಲಿ ಮತಯಾಚನೆ ನಡೆಸಿದರು.
ಬೊಮ್ಮನಹಳ್ಳಿ ಶಾಸಕ.ಸತೀಶ್ ರೆಡ್ಡಿ ನೇತೃತ್ವದಲ್ಲಿ ಮತಯಾಚಿಸಿದರು. ದಕ್ಷಿಣದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಲ್ಲವೂ ಸರಿ ಹೋಗಿದೆ ಎಂದು ತೇಜಸ್ವಿ ಹೇಳಿದ್ರು.
ಬನಶಂಕರಿಯಲ್ಲಿ ಬೃಹತ್ ರೋಡ್ ಶೋನಲ್ಲಿ ಬಿಜೆಪಿಯ ಎಲ್ಲಾ ನಾಯಕರು ಭಾಗವಹಿಸಿ ತೇಜಸ್ವಿ ಸೂರ್ಯಪರ ಮತಯಾಚನೆ ನಡೆಸುತ್ತಿದ್ದಾರೆಂರು ಶಾಸಕ.ಸತೀಶ್ ರೆಡ್ಡಿ ಹೇಳಿದ್ರು.
ಹೆಚ್.ಎಸ್.ಆರ್. ಬಡಾವಣೆಯ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ರು.