ಓಮನ್ ವಿರುದ್ಧ ಶುಕ್ರವಾರ ನಡೆದ ಏಷ್ಯಾ ಕಪ್ ಪಂದ್ಯಾಟದ ವೇಳೆ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ತಂಡದ ಆಟಗಾರನ ಹೆಸರನ್ನು ಮರೆತು ಕೆಲ ಕ್ಷಣ ಮುಜುಗರಕ್ಕೆ ಒಳಗಾದರು. ಈ ವೇಳೆ ಅವರು ತಮ್ಮ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅವರನ್ನು ನೆನಪಿಸಿಕೊಂಡರು.
ರೋಹಿತ್ ಶರ್ಮಾ ಅವರು ಹಲವು ಬಾರಿ ತಮ್ಮ ಟೀ ಇಂಡಿಯಾದ ಸಹ ಆಟಗಾರರನ್ನು ಹಾಗೂ ಕೆಲ ವಿಚಾರಗಳನ್ನು ಮರೆಯುವುದರಿಂದ ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನು ಅವಗರ ಸಹ ಆಟಗಾರರು ಕೂಡಾ ಒಪ್ಪಿಕೊಂಡಿದ್ದಾರೆ.
ಸೂರ್ಯಕುಮಾರ್ ಅವರಲ್ಲಿ ರವಿಶಾಸ್ತ್ರಿ ಟಾಸ್‌ನಲ್ಲಿ ತಮ್ಮ ತಂಡದ ಸಂಯೋಜನೆಯನ್ನು ಬಹಿರಂಗಪಡಿಸಲು ಕೇಳಿದಾಗ ಒಬ್ಬರ ಹೆಸರನ್ನು ಅವರು ಮರೆತುಬಿಟ್ಟರು. ನಡೆಯುತ್ತಿರುವ ಏಷ್ಯಾ ಕಪ್ 2025 ರಲ್ಲಿ ಭಾರತದ ಬ್ಯಾಟಿಂಗ್ ಸಮಯದ ಕೊರತೆಯನ್ನು ಉಲ್ಲೇಖಿಸಿ ಸೂರ್ಯ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡರು ಮತ್ತು ಹರ್ಷಿತ್ ರಾಣಾ ಅವರನ್ನು ಸ್ಪಷ್ಟವಾಗಿ ನೆನಪಿಸಿಕೊಂಡಾಗ, ಎರಡನೇ ಆಟಗಾರರನ ಹೆಸರನ್ನು ಹೇಳಲು ಸೂರ್ಯ ಅವರು ತಡವರಿಸಿದರು.
ಓ ದೇವರೇ! ನಾನು ರೋಹಿತ್ ಶರ್ಮಾನಂತೆ ಆಗಿದ್ದೇನೆ." ಸೂರ್ಯ ಎರಡನೇ ಬದಲಾವಣೆಯನ್ನು ಹೇಳಲಾಗದೆ ಅಲ್ಲಿಂದ್ದ ಹೊರನಡೆದರು. ನಂತರ ಬಹಿರಂಗಪಡಿಸಿದಂತೆ, ಅರ್ಷದೀಪ್ ಸಿಂಗ್ ಸೇರ್ಪಡೆಯಾದರು.