Publish Date: Fri, 06 Oct 2017 (10:22 IST)
Updated Date: Fri, 06 Oct 2017 (10:24 IST)
ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿ ಎದುರಾಳಿ ಬ್ಯಾಟ್ಸ್ ಮನ್ ಗೆ ಚಳ್ಳೆ ಹಣ್ಣು ತಿನ್ನಿಸಲು ಮಾಡುವ ಕೆಲಸವೊಂದು ಅವರಿಗೇ ಮುಳುವಾಗುವ ಸಾಧ್ಯತೆಯಿದೆ.
ಐಸಿಸಿ ಹೊಸ ನಿಯಮದ ಪ್ರಕಾರ, ಫೀಲ್ಡರ್ ಎದುರಾಳಿ ಬ್ಯಾಟ್ಸ್ ಮನ್ ಗೆ ಚಳ್ಳೇಹಣ್ಣು ತಿನ್ನಿಸಲು ಬಾಲ್ ಕೈಯಲ್ಲಿದ್ದು ಫೀಲ್ಡಿಂಗ್ ಮಾಡಿದಂತೆ ನಾಟಕವಾಡುವಂತಿಲ್ಲ. ಹೀಗೆ ಮಾಡಿದರೆ ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್ ಸಿಗಲಿದೆ. ಹೀಗೇ ಮಾಡಿ ಆಸ್ಟ್ರೇಲಿಯಾ ದೇಶೀಯ ಟೂರ್ನಿಯೊಂದರಲ್ಲಿ ತಂಡವೊಂದು ಪೆನಾಲ್ಟಿ ಶಿಕ್ಷೆ ಅನುಭವಿಸಿದೆ.
ಆದರೆ ಧೋನಿ ಕೆಲವೊಮ್ಮೆ ಇದೇ ರೀತಿ ಎದುರಾಳಿಯನ್ನು ಕನ್ ಫ್ಯೂಸ್ ಮಾಡುತ್ತಾರೆ. ಧೋನಿಯ ಈ ಚಾಳಿ ಇದೀಗ ಅವರಿಗೇ ಮುಳುವಾಗುವ ಸಾಧ್ಯತೆಯಿದೆ. ಇನ್ನು ಮುಂದೆ ಅವರು ಬಾಲ್ ಕ್ಯಾಚ್ ಮಾಡಿದಂತೆ ನಾಟಕವಾಡಿ ಸ್ಟಂಪ್ ಗೆ ಬಾಲ್ ತಾಗಿಸಿದಂತೆ ಎದುರಾಳಿಗೆ ಕನ್ ಫ್ಯೂಸ್ ಮಾಡಿದರೆ ಪೆನಾಲ್ಟಿ ಶಿಕ್ಷೆ ಗ್ಯಾರಂಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ