Select Your Language

Notifications

webdunia
webdunia
webdunia
webdunia

ಸಿಕ್ಕ ಸಣ್ಣ ಗ್ಯಾಪಲ್ಲೇ ಪ್ರಿಯತಮೆ ಜತೆ ಕ್ರಿಕೆಟಿಗ ಭುವನೇಶ್ವರ್ ನಿಶ್ಚಿತಾರ್ಥ

ಸಿಕ್ಕ ಸಣ್ಣ ಗ್ಯಾಪಲ್ಲೇ ಪ್ರಿಯತಮೆ ಜತೆ ಕ್ರಿಕೆಟಿಗ ಭುವನೇಶ್ವರ್ ನಿಶ್ಚಿತಾರ್ಥ
ಮುಂಬೈ , ಶುಕ್ರವಾರ, 6 ಅಕ್ಟೋಬರ್ 2017 (08:42 IST)
ಮುಂಬೈ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೂ ಮೊದಲೇ ಸಿಕ್ಕ ಬಿಡುವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ತಮ್ಮ ಪ್ರಿಯತಮೆ ನೂಪುರ್ ನಗರ್ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 
ಬುಧವಾರ ನೋಯ್ಡಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಭುವಿ ಮತ್ತು ನೂಪುರ್ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಸಾಕ್ಷಿಯಾಗಿದ್ದರು ಎನ್ನಲಾಗಿದೆ.

ಎಂಜಿನಿಯರಿಂಗ್ ಪದವೀಧರೆಯಾಗಿರುವ ನೂಪುರ್ ಮತ್ತು ಭುವಿ ಅಕ್ಕಪಕ್ಕದ ಮನೆಯವರಾಗಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಭುವಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತಾವು ಡೇಟಿಂಗ್ ನಡೆಸುತ್ತಿರುವ ವಿಚಾರ ಹೇಳಿದ್ದರೂ ಹುಡುಗಿ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಜತೆ ಧೋನಿ ಫ್ರೀ ಟೈಮ್ ಆಟ ಫುಲ್ ವೈರಲ್