Publish Date: Wed, 17 Feb 2021 (10:17 IST)
Updated Date: Wed, 17 Feb 2021 (10:20 IST)
ಚೆನ್ನೈ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಕೊನೆಯ ಹಂತದಲ್ಲಿ ಸಿಕ್ಸರ್ ಸಿಡಿಸಿದ ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ ಈಗ ಐಪಿಎಲ್ ಫ್ರಾಂಚೈಸಿಗಳ ಡಾರ್ಲಿಂಗ್ ಆಗಿದ್ದಾರೆ.
ನಾಳೆ ಐಪಿಎಲ್ 14 ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮೊದಲು ಅವರು ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ನಿನ್ನೆ 18 ಎಸೆತದಲ್ಲಿ 43 ರನ್ ಚಚ್ಚಿದ್ದ ಮೊಯಿನ್ ಅಲಿ, ಬೌಲಿಂಗ್ ನಲ್ಲೂ ಮಿಂಚಿದ್ದರು. ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಆಫ್ ಸ್ಪಿನ್ನರ್ ಹುಡುಕಾಟದಲ್ಲಿದ್ದು, ಮೊಯಿನ್ ಅಲಿ ಚೆನ್ನೈ ಪಾಲಾದರೂ ಅಚ್ಚರಿಯಿಲ್ಲ.