Select Your Language

Notifications

webdunia
webdunia
webdunia
Friday, 11 April 2025
webdunia

ತಂದೆಯ ಅಂತ್ಯ ಸಂಸ್ಕಾರಕ್ಕೆ ಬರದ ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್
ನವದೆಹಲಿ , ಶನಿವಾರ, 21 ನವೆಂಬರ್ 2020 (09:30 IST)
ನವದೆಹಲಿ: ಇತ್ತೀಚೆಗೆ ಐಪಿಎಲ್ ನಲ್ಲಿ ಆರ್ ಸಿಬಿ ಪರ ಮಿಂಚಿನ ದಾಳಿ ನಡೆಸಿದ ವೇಗಿ ಮೊಹಮ್ಮದ್ ಸಿರಾಜ್ ಈಗ ತಂದೆಯ ಅಗಲುವಿಕೆಯ ನೋವಿನಲ್ಲಿದ್ದಾರೆ.



ಆದರೆ ಸದ್ಯಕ್ಕೆ ಆಸ್ಟ್ರೇಲಿಯಾ ಸರಣಿಗಾಗಿ ಕಾಂಗಾರೂ ನಾಡಿಗೆ ಟೀಂ ಇಂಡಿಯಾ ಜತೆಗೆ ಪ್ರವಾಸಗೈದಿರುವ ಮೊಹಮ್ಮದ್ ಸಿರಾಜ್ ಗೆ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಾಗುತ್ತಿಲ್ಲ. ಕೊರೋನಾ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ಸಿರಾಜ್ ಕ್ವಾರಂಟೈನ್ ನಿಯಮವನ್ನು ಪಾಲಿಸಲೇಬೇಕಿದೆ. ಹೀಗಾಗಿ ಅವರು ಪ್ರವಾಸದ ಮಧ್ಯೆ ಜೈವಿಕ ಸುರಕ್ಷಾ ವಲಯದಿಂದ ಹೊರಬರುವಂತಿಲ್ಲ. ಇದೇ ಕಾರಣಕ್ಕೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಅವರು ನನ್ನ ತಂದೆ ಯಾವತ್ತೂ ದೇಶದ ಹೆಸರು ಉತ್ತುಂಗಕ್ಕೇರಿಸು ಎನ್ನುತ್ತಿದ್ದರು. ಅದನ್ನು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಅನುಪಸ್ಥಿತಿ ಕೆಎಲ್ ರಾಹುಲ್ ಗೆ ಲಾಭ