Select Your Language

Notifications

webdunia
webdunia
webdunia
webdunia

ಇಂದು ಕೊಹ್ಲಿಗೆ ಸಿಕ್ಕಿದ್ದ ವಿನಾಯಿತಿ ಅಂದು ಸುನಿಲ್ ಗವಾಸ್ಕರ್ ಗೆ ಸಿಕ್ಕಿರಲಿಲ್ಲ!

ಇಂದು ಕೊಹ್ಲಿಗೆ ಸಿಕ್ಕಿದ್ದ ವಿನಾಯಿತಿ ಅಂದು ಸುನಿಲ್ ಗವಾಸ್ಕರ್ ಗೆ ಸಿಕ್ಕಿರಲಿಲ್ಲ!
ಮುಂಬೈ , ಗುರುವಾರ, 19 ನವೆಂಬರ್ 2020 (09:05 IST)
ಮುಂಬೈ: ಪತ್ನಿ ಅನುಷ್ಕಾ ಶರ್ಮಾ ಹೆರಿಗೆ ಸಮಯದಲ್ಲಿ ಆಕೆಯ ಜತೆಗಿರಲು ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಗೆ ಮನವಿ ಮಾಡಿದ್ದರು. ಅದನ್ನು ಬಿಸಿಸಿಐ ಪುರಸ್ಕರಿಸಿದೆ ಕೂಡಾ. ಆದರೆ ಹಿಂದೊಮ್ಮೆ ಸುನಿಲ್ ಗವಾಸ್ಕರ್ ಗೆ ಈ ರೀತಿ ಬಿಸಿಸಿಐ ವಿನಾಯಿತಿ ನೀಡಿರಲಿಲ್ಲ.


1976 ರಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸದಲ್ಲಿತ್ತು. ಆಗ ಗವಾಸ್ಕರ್ ಪತ್ನಿ ಪುತ್ರನಿಗೆ ಜನ್ಮ ನೀಡಿದ್ದರು. ಆ ಸಂದರ್ಭದಲ್ಲಿ ಗವಾಸ್ಕರ್ ತವರಿಗೆ ಮರಳಿ ಮಗನನ್ನು ನೋಡಲು ಬಿಸಿಸಿಐ ಅನುಮತಿ ಕೇಳಿದ್ದರು. ಆದರೆ ತಕ್ಷಣವೇ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತೆರಳಬೇಕಾಗಿದ್ದರಿಂದ ಅವರಿಗೆ ಬಿಸಿಸಿಐ ಅನುಮತಿ ನೀಡಿರಲಿಲ್ಲ. ಗವಾಸ್ಕರ್ ಗೆ ಈ ಹತಾಶೆ ಮನದಲ್ಲಿತ್ತು. ಆದರೆ ಆ ಸರಣಿಯಲ್ಲಿ ವಿಂಡೀಸ್ ಬೌಲರ್ ಗಳು ಬೇಕೆಂದೇ ಭಾರತೀಯರನ್ನು ಟಾರ್ಗೆಟ್ ಮಾಡಿ ಬೀಮರ್ ಗಳನ್ನು ಎಸೆದು ಗಾಯಗೊಳಿಸುತ್ತಿದ್ದಾಗ ಗವಾಸ್ಕರ್ ಪಿತ್ತ ನೆತ್ತಿಗೇರಿತ್ತು. ನಾನು ಇಲ್ಲಿ ಸಾಯಲು ಇಷ್ಟಪಡಲ್ಲ. ನಾನು ಬದುಕಿ ಊರಿಗೆ ಹೋಗಿ ಮಗನನ್ನು ನೋಡಲು ಬಯಸುತ್ತೇನೆ ಎಂದು ಕೂಗಾಡಿದ್ದರಂತೆ. ಈ ವಿಚಾರವನ್ನು ಅವರೇ ಒಮ್ಮೆ ಆಂಗ್ಲ ಮಾಧ್ಯಮವೊಂದರ ಕಾಲಂನಲ್ಲಿ ಬರೆದುಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದ ಬಳಿಕ ವಿರಾಟ್ ಕೊಹ್ಲಿಗೆ ಐಸ್ ಇಟ್ಟ ಸೂರ್ಯಕುಮಾರ್ ಯಾದವ್!