Webdunia - Bharat's app for daily news and videos

Install App

ತಮಿಳು ಬರಲ್ಲ ಎಂದು ಛೇಡಿಸಿದ ಅಭಿಮಾನಿಯ ಚಳಿ ಬಿಡಿಸಿದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್

Webdunia
ಬುಧವಾರ, 16 ಅಕ್ಟೋಬರ್ 2019 (10:34 IST)
ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ರಂಗದ ಸಚಿನ್ ತೆಂಡುಲ್ಕರ್ ಎಂದೇ ಕರೆಯಿಸಿಕೊಳ್ಳುವ ಮಿಥಾಲಿ ರಾಜ್ ಕೇವಲ ಆಟದಲ್ಲಿ ಮಾತ್ರ ಜಾಣೆಯಲ್ಲ, ಟೀಕಿಸಿದವರಿಗೂ ತಕ್ಕ ಉತ್ತರ ಕೊಡುವಲ್ಲಿ ಹಿಂದೆಮುಂದೆ ನೋಡಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ.


ಇದೀಗ ಮತ್ತೆ ಮಿಥಾಲಿ ಟೀಕಿಸಿದವನಿಗೆ ತಕ್ಕ ಎದಿರೇಟು ಕೊಡುವ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ. ದ.ಆಫ್ರಿಕಾ ವಿರುದ್ಧ 3-0 ಅಂತರದಿಂದ ಏಕದಿನ ಸರಣಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿದ್ದ ನಾಯಕಿ ಮಿಥಾಲಿ ರಾಜ್ ರನ್ನು ಅಭಿಮಾನಿಯೊಬ್ಬ ತಮಿಳು ಭಾಷೆ ಮಾತನಾಡಲ್ಲ ಎಂದು ಟ್ವಿಟರ್ ನಲ್ಲಿ ಕೆಣಕಿದ್ದಾನೆ.

ಮಿಥಾಲಿ ಯಾವತ್ತೂ ತೆಲುಗು, ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ಮಾತೃಭಾಷೆ ತಮಿಳು ಮಾತನಾಡಲ್ಲ ಎಂದು ಕೆಣಕಿದ್ದಾನೆ. ಈತನಿಗೆ ತಕ್ಕ ಎದಿರೇಟು ಕೊಟ್ಟಿರುವ ಮಿಥಾಲಿ ಕೆಲವು ಸಾಲುಗಳನ್ನು ತಮಿಳಿನಲ್ಲೇ ಬರೆದಿದ್ದಾರೆ. ಜತೆಗೆ ನಾನು ಎಲ್ಲಕ್ಕಿಂತ ಮೊದಲು ಹೆಮ್ಮೆಯ ಭಾರತೀಯಳು. ನನ್ನ ಪ್ರತೀ ಪೋಸ್ಟ್ ಗೂ ಟೀಕೆ ಮಾಡುವ ನಿಮ್ಮಂತಹವರೇ ನನಗೆ ಹೆಚ್ಚು ಬೆಳೆಯಲು ಸ್ಪೂರ್ತಿ ಎಂದು ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಭಾರತ ಪಾಕಿಸ್ತಾನ ಕ್ರಿಕೆಟ್: ಪಹಲ್ಗಾಮ್ ನಲ್ಲಿ ಪತಿ ಮೃತದೇಹದ ಮುಂದೆ ಕೂತ ಮಹಿಳೆಯರ ಮರೆತು ಹೋಯ್ತಾ

ಭಾರತ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಏಷ್ಯಾ ಕಪ್ ಗೆ ಆಯ್ಕೆ ಮಾಡದಿದ್ದರೇನಂತೆ ಶ್ರೇಯಸ್ ಅಯ್ಯರ್ ಗೆ ದೊಡ್ಡ ಸ್ಥಾನ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments