Select Your Language

Notifications

webdunia
webdunia
webdunia
webdunia

ನನಗೆ ಒಂದು ಚಾನ್ಸ್ ಕೊಡಿ, ನೀವು ಮುಟ್ಟಿಕೊಳ್ಳುವಂತೆ ತಿರುಗಿ ಕೊಡ್ತೀನಿ ಎಂದಿದ್ದರಂತೆ ಮಯಾಂಕ್ ಅಗರ್ವಾಲ್!

ನನಗೆ ಒಂದು ಚಾನ್ಸ್ ಕೊಡಿ, ನೀವು ಮುಟ್ಟಿಕೊಳ್ಳುವಂತೆ ತಿರುಗಿ ಕೊಡ್ತೀನಿ ಎಂದಿದ್ದರಂತೆ ಮಯಾಂಕ್ ಅಗರ್ವಾಲ್!
ಇಂಧೋರ್ , ಭಾನುವಾರ, 17 ನವೆಂಬರ್ 2019 (09:02 IST)
ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಈ ದ್ವಿಶತಕದ ಹಿಂದಿನ ಕತೆಯನ್ನು ವಿವರಿಸಿದ್ದಾರೆ.


ಬಾಂಗ್ಲಾ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ ಮಯಾಂಕ್ ಗೆ ಜೀವದಾನ ಲಭಿಸಿತ್ತು. ಬಾಂಗ್ಲಾ ಫೀಲ್ಡರ್ ಇಮ್ರುಲ್ ಕೈಲ್ಸ್ ಮಯಾಂಕ್ ನೀಡಿದ ಕ್ಯಾಚ್ ಕೈ ಚೆಲ್ಲಿದ್ದರು. ಒಂದು ವೇಳೆ ಆಗ ಇಮ್ರುಲ್ ಕ್ಯಾಚ್ ಹಿಡಿದಿದ್ದರೆ ಮಯಾಂಕ್ ದ್ವಿಶತಕದ ಕನಸು ನನಸಾಗುತ್ತಿರಲಿಲ್ಲ. ಔಟಾದ ಬಳಿಕ ಮಯಾಂಕ್ ಪೆವಿಲಿಯನ್ ಕುಳಿತಿದ್ದಾಗ ಕೈಲ್ಸ್ ಬಳಿಗೆ ಬಂದು ಅಭಿನಂದನೆಯನ್ನೂ ಸಲ್ಲಿಸಿದ್ದರು.

ಈ ಬಗ್ಗೆ ಪತ್ರಕರ್ತರು ಮಯಾಂಕ್ ರನ್ನು ಪ್ರಶ್ನಿಸಿದ್ದರು. ಇಮ್ರುಲ್ ಗೆ ಧನ್ಯವಾದ ಹೇಳಿದಿರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮಯಾಂಕ್ ಆ ಸಂದರ್ಭದಲ್ಲಿ ನನಗೆ ಒಂದು ಚಾನ್ಸ್ ಕೊಡಿ. ನಿಮಗೆ ಅದರ ಹತ್ತುಪಟ್ಟು ತಿರುಗೇಟು ನೀಡುತ್ತೇನೆ ಎಂದು ಮನದಲ್ಲಿಯೇ ಅಂದುಕೊಂಡಿದ್ದೆ. ಹಾಗೇ ಮಾಡಿದೆ ಕೂಡಾ ಎಂದು ಮಯಾಂಕ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟೇ ಹುಡುಗಿಯರಿದ್ದರೂ ಕೆಎಲ್ ರಾಹುಲ್ ಗೆ ಮಾತ್ರ ಈ ನಟಿಯ ಮೇಲೆ ಕ್ರಶ್ ಅಂತೆ!