Publish Date: Sat, 16 Nov 2019 (09:22 IST)
Updated Date: Sat, 16 Nov 2019 (09:24 IST)
ಇಂಧೋರ್: ಡಬಲ್ ಸೆಂಚುರಿ ಬಾರಿಸಿದ ಖುಷಿಯಲ್ಲಿರುವ ಟೀಂ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಕೊನೆಗೆ ಪತ್ರಕರ್ತರ ಮುಂದೆಯೂ ತಾವೆಷ್ಟು ಚಾಲಾಕಿ ಎಂದು ತೋರಿಸಿಕೊಂಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನ ದ್ವಿಶತಕ ಗಳಿಸಿದ ಮಯಾಂಕ್ ಐದೇ ಇನಿಂಗ್ಸ್ ಅವಧಿಯಲ್ಲಿ ಎರಡು ಬಾರಿ ದ್ವಿಶತಕ ಗಳಿಸಿದ ದಾಖಲೆ ಮಾಡಿದ್ದರು.
ಈ ಬಗ್ಗೆ ಪತ್ರಕರ್ತರೊಬ್ಬರು ಮಯಾಂಕ್ ರನ್ನು ಇಂತಹ ಅದ್ಭುತ ರನ್ ಗಳಿಸಿದ ದಿನ ಸಂಜೆ ವೇಳೆ ಹೋಟೆಲ್ ರೂಂನಲ್ಲಿ ಕುಳಿತು ನೀವು ಏನು ಮಾಡುತ್ತೀರಿ? ನಿಮ್ಮ ಆಟದ ಹೈಲೈಟ್ ನೋಡ್ತೀರಾ? ಇಲ್ಲಾ ಯಾವುದಾದರೂ ಸಿನಿಮಾ ನೋಡಿ ರಿಲ್ಯಾಕ್ಸ್ ಆಗ್ತೀರಾ ಎಂದು ಕೇಳಿದರು.
ಇದಕ್ಕೆ ಅಷ್ಟೇ ತಮಾಷೆಯಾಗಿ ಮಯಾಂಕ್ ಉತ್ತರಿಸಿದ್ದಾರೆ. ‘ಮಯಾಂಕ್ ಪಬ್ಜಿ ಗೇಮ್ ಆಡ್ತಾರೆ’ ಎಂದು ತಮಾಷೆಯಾಗಿ ಮಯಾಂಕ್ ಉತ್ತರಿಸಿದರೆ ಅಲ್ಲಿ ನೆರೆದಿದ್ದ ವರದಿಗಾರರಿಗೆ ಶಾಕ್ ಜತೆಗೆ ನಗುವೋ ನಗು.