Publish Date: Sun, 17 Nov 2019 (08:59 IST)
Updated Date: Sun, 17 Nov 2019 (09:01 IST)
ಬೆಂಗಳೂರು: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೆಸರು ಅನೇಕ ಬಾರಿ ಅನೇಕ ನಟಿಯರೊಂದಿಗೆ ಥಳುಕು ಹಾಕಿಕೊಂಡಿತ್ತು. ಆದರೆ ಟೀಂ ಇಂಡಿಯಾದ ಈ ಎಲಿಜಿಬಲ್ ಬ್ಯಾಚುಲರ್ ಗೆ ಯಾರಿಷ್ಟ ಗೊತ್ತಾ?
ಒಮ್ಮೆ ನಟಿ ಆತಿಥ್ಯ ಶೆಟ್ಟಿ ಜತೆಗೆ, ಮತ್ತೊಮ್ಮೆ ನಿಧಿ ಅಗರ್ವಾಲ್ ಜತೆಗೆ ರಾಹುಲ್ ಡೇಟಿಂಗ್ ನಡೆಸುತ್ತಾರೆ ಎಂಬ ರೂಮರ್ ಹಬ್ಬಿತ್ತು. ಆದರೆ ಇದೆಲ್ಲಾ ಸುಳ್ಳು ಎಂದು ಇಬ್ಬರೂ ತಳ್ಳಿ ಹಾಕಿದ್ದರು.
ಆದರೆ ರಾಹುಲ್ ಸಂದರ್ಶನವೊಂದರಲ್ಲಿ ತಮ್ಮ ಇಷ್ಟದ ನಟಿ ಯಾರು? ತಮಗೆ ಯಾವ ನಟಿಯ ಮೇಲೆ ಕ್ರಶ್ ಎಂದು ಬಹಿರಂಗಪಡಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಅರ್ಜುನ್ ಕಪೂರ್ ಪ್ರೇಯಸಿ ಮಲೈಕಾ ಅರೋರಾ ಅಂತೆ. ಅರ್ಬಾಜ್ ಖಾನ್ ಮಾಜಿ ಪತ್ನಿ ಎಂದರೆ ತಮ್ಮ ಆಲ್ ಟೈಮ್ ಫೇವರಿಟ್ ಎಂದು ರಾಹುಲ್ ಹೇಳಿಕೊಂಡಿದ್ದಾರೆ.