Publish Date: Tue, 12 Nov 2019 (09:48 IST)
Updated Date: Tue, 12 Nov 2019 (09:49 IST)
ಬೆಂಗಳೂರು: ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸಿದ್ದ ಬೆಲ್ ಬಾಟಮ್ ಸಿನಿಮಾ ಕನ್ನಡದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿ ಅಭಿನಯಲ್ಲಿ ಬೆಲ್ ಬಾಟಮ್ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರುತ್ತಿದೆ.
ಈ ಟೈಟಲ್ ನೋಡಿದ ತಕ್ಷಣ ಇದು ಕನ್ನಡ ಸಿನಿಮಾದ ರಿಮೇಕ್ ಇರಬಹುದೇ ಎಂಬ ಸುದ್ದಿ ಹಬ್ಬಿತ್ತು. ಯಾಕೆಂದರೆ ಈ ಮೊದಲು ಬೆಲ್ ಬಾಟಮ್ ಹಿಂದಿಯಲ್ಲೂ ರಿಮೇಕ್ ಆಗಲಿದೆ ಎಂಬ ಸುದ್ದಿಯಿತ್ತು. ಹೀಗಾಗಿ ಇದುವೇ ಆ ಸಿನಿಮಾನಾ ಎಂಬ ಊಹಾಪೋಹವಿತ್ತು.
ಆದರೆ ಅದಕ್ಕೀಗ ಅಕ್ಷಯ್ ಕುಮಾರ್ ತೆರೆ ಎಳೆದಿದ್ದು, ಇದು ಹಿಂದಿಯ ರಿಮೇಕ್ ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅಕ್ಷಯ್ ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ. ಪಕ್ಕಾ ಸ್ವಮೇಕ್. ನೈಜ ಘಟನೆಯೊಂದರ ಆಧಾರಿತ ಸಿನಿಮಾ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.