ಸಿನಿಮಾ ರಂಗಕ್ಕೆ ಗುಡ್ ಬೈ ಹೇಳ್ತಾರಾ ಅಮಿತಾಭ್ ಬಚ್ಚನ್?

ಶುಕ್ರವಾರ, 8 ನವೆಂಬರ್ 2019 (09:13 IST)
ಮುಂಬೈ: 50 ವರ್ಷಗಳ ಸಾರ್ಥಕ ಸಿನಿಮಾ ಬದುಕು ಸವೆಸಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.


ಇತ್ತೀಚೆಗೆ ಬಿಗ್ ಬಿ ಆರೋಗ್ಯ ಮೊದಲಿನಂತಿಲ್ಲ. ಆಗಾಗ ಆಸ್ಪತ್ರೆಗೆ ಅಲೆದಾಡಬೇಕಾಗುತ್ತಿದೆ. ಇದರಿಂದಾಗಿ ವೈದ್ಯರೂ ಅವರಿಗೆ ವಿಶ್ರಾಂತಿಗೆ ಸೂಚಿಸಿದ್ದಾರಂತೆ. ನಟನೆ ಬಿಟ್ಟು ವಿಶ್ರಾಂತಿ ಪಡೆಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರಂತೆ. ಹಾಗಂತ ಬಿಗ್ ಬಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇಷ್ಟು ವರ್ಷಗಳ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವೆ. ನನ್ನ ದೇಹ ಸಾಕಷ್ಟು ದಂಡನೆಗೊಳಗಾಗಿದೆ, ದಣಿದಿದೆ. ಹೀಗಾಗಿ ವೈದ್ಯರು ನನಗೆ ನಟನೆಯಿಂದ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸುತ್ತಲೇ ಇದ್ದಾರೆ. ಹಾಗಿದ್ದರೂ ಸುಮ್ಮನೇ ಕೂರಲು ಮನಸ್ಸು ಬರುತ್ತಿಲ್ಲ ಎಂದು ಕಾವ್ಯಾತ್ಮಕವಾಗಿ ಬಿಗ್ ಬಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆ ದೃಶ್ಯ ರಿಲೀಸ್ ಜತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೊಟ್ಟ ಮತ್ತೊಂದು ಗುಡ್ ನ್ಯೂಸ್