Publish Date: Wed, 30 Aug 2017 (10:09 IST)
Updated Date: Wed, 30 Aug 2017 (10:11 IST)
ಕೊಲೊಂಬೊ: ಕ್ರಿಕೆಟಿಗ ಧೋನಿಯನ್ನು ಆರಾಧಿಸುವ ಎಂತೆಂತಹಾ ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅಂತಹದ್ದೇ ಘಟನೆ ಕೊಲೊಂಬೋದಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿಗೆ ಮತ್ತೊಮ್ಮೆ ಎದುರಾಗಿದೆ.
ನಾಲ್ಕನೇ ಏಕದಿನ ಪಂದ್ಯಕ್ಕೆ ನೆಟ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿ ಬಳಿಗೆ ಲಂಕಾ ಮೂಲದ ಅಭಿಮಾನಿಯೊಬ್ಬ ಬಂದಿದ್ದ. ಮೊದಲು ರೋಹಿತ್ ಶರ್ಮಾ ಬಳಿಗೆ ಬಂದ ಆತ ಧೋನಿ ಎಂದು ತಪ್ಪಾಗಿ ತಿಳಿದು ಸೆಲ್ಫೀ ಕೇಳಲು ಬಯಸಿದ್ದ.
ಆದರೆ ರೋಹಿತ್ ನೆಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಕಡೆಗೆ ಕೈ ತೋರಿಸಿದಾಗ ಅಲ್ಲಿಗೆ ತೆರಳಿದ ಆ ಅಭಿಮಾನಿ, ಧೋನಿ ಅಭ್ಯಾಸಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಸೆಲ್ಫೀ ಕೇಳಿಕೊಂಡ. ಆದರೆ ಧೋನಿ ಒಂದು ಸೆಲ್ಫೀಗೆ ಪೋಸ್ ಕೊಟ್ಟು ಮೈದಾನದಿಂದ ಹೊರ ಹೋಗುವಂತೆ ಸೂಚಿಸಿದರು.
ಕೊನೆಗೆ ಈ ಕಸಿವಿಸಿ ಗಮನಿಸಿ ಟೀಂ ಇಂಡಿಯಾ ಸಹಾಯಕ ಸಿಬ್ಬಂದಿಗಳು ಆತನನ್ನು ಹೊರಗಟ್ಟಿದರು. ನಂತರ ಧೋನಿ ಎಂದಿನಂತೆ ಅಭ್ಯಾಸ ಮುಂದುವರಿಸಿದರು. ಬಳಿಕ ತಿಳಿದುಬಂದಿದ್ದೇನೆಂದರೆ, ಈತ ಮೈದಾನದ ಸಿಬ್ಬಂದಿಗಳಲ್ಲಿ ಒಬ್ಬನಾಗಿದ್ದ. ಹೀಗಾಗಿ ಸುಲಭವಾಗಿ ಮೈದಾನದೊಳಕ್ಕೆ ಪ್ರವೇಶ ಪಡೆದಿದ್ದ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ