Select Your Language

Notifications

webdunia
webdunia
webdunia
webdunia

ಸೋಲು ತಪ್ಪಿಸಿಕೊಳ್ಳಲು ಲಂಕಾ ಆಡಿದ್ದ ನಾಟಕದ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

ಸೋಲು ತಪ್ಪಿಸಿಕೊಳ್ಳಲು ಲಂಕಾ ಆಡಿದ್ದ ನಾಟಕದ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
ಕೋಲ್ಕೊತ್ತಾ , ಮಂಗಳವಾರ, 21 ನವೆಂಬರ್ 2017 (11:59 IST)
ಕೋಲ್ಕೊತ್ತಾ: ಭಾರತದ ವಿರುದ್ಧ ಕೊನೆಯ ಕ್ಷಣದಲ್ಲಿ ಸೋಲಿನ ಅಂಚಿಗೆ ಬಂದಾಗ, ಅದನ್ನು ತಪ್ಪಿಸಲು ಶ್ರೀಲಂಕಾ ತಂಡ ಸಮಯ ವ್ಯರ್ಥ ಮಾಡುತ್ತಾ ನಾಟಕವಡಿದ್ದು ತಪ್ಪಲ್ಲ ಎಂದು ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
 

ಪಂದ್ಯದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇದೆಲ್ಲಾ ಪಂದ್ಯದಲ್ಲಿ ಸರ್ವೇ ಸಾಮಾನ್ಯ. ಇದೆಲ್ಲಾ ಮಾಮೂಲು ಟ್ರಿಕ್ ಗಳಷ್ಟೇ. ನಾವಾದರೂ ಬಹುಶಃ ಹೀಗೇ ಮಾಡುತ್ತಿದ್ದೆವೇನೋ’ ಎಂದು ರಾಹುಲ್ ಲಂಕಾ ನಾಟಕಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಕೊನೆಯ ಓವರ್ ಗಳಲ್ಲಿ ಬೇಕೆಂದೇ ಫಿಸಿಯೋವನ್ನು ಮೈದಾನಕ್ಕೆ ಕಳುಹಿಸಿ ಸಮಯ ವ್ಯರ್ಥ ಮಾಡಿದ್ದ ಲಂಕಾ, ಮಂದ ಬೆಳಕಿನ ಕಾರಣ ನೀಡಿ ಆಟ ನಿಲ್ಲಿಸಲು ಮನವಿ ಸಲ್ಲಿಸಿತ್ತು. ಇನ್ನೂ 6 ಓವರ್ ಗಳಷ್ಟು ಪಂದ್ಯ ಬಾಕಿಯಿತ್ತು ಮತ್ತು ಭಾರತಕ್ಕೆ ಗೆಲುವಿಗೆ ಮೂರು ವಿಕೆಟ್ ಕಿತ್ತಿದ್ದರೆ ಸಾಕಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಶಾಕ್