ಸಚಿನ್ ಗಿಂತಲೂ ವಿರಾಟ್ ಕೊಹ್ಲಿ ಗ್ರೇಟ್ ಎಂದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಈಗ ಟ್ವಿಟರ್ ನಲ್ಲಿ ರೋಸ್ಟ್!

Webdunia
ಮಂಗಳವಾರ, 8 ಜನವರಿ 2019 (09:35 IST)
ಮುಂಬೈ: ಈಗಾಗಲೇ ಕಳಪೆ ಫಾರ್ಮ್ ನಿಂದಾಗಿ ಟ್ವಿಟರ್ ನಲ್ಲಿ ಮನಬಂದಂತೆ ಟ್ರೋಲ್ ಗೊಳಗಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.


ಕರಣ್ ಜೋಹರ್ ನಡೆಸಿಕೊಡುವ ಶೋನಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆಂಡುಲ್ಕರ್ ಗಿಂತಲೂ ಗ್ರೇಟ್ ಎಂದು ಹೇಳಿ ಟ್ವಿಟರ್ ನಲ್ಲಿ ಚೆನ್ನಾಗಿಯೇ ಉಗಿಸಿಕೊಂಡಿದ್ದಾರೆ.

ಕರಣ್ ಶೋನಲ್ಲಿ ತೆಂಡುಲ್ಕರ್ ಮತ್ತು ಕೊಹ್ಲಿ. ಇವರಿಬ್ಬರಲ್ಲಿ ಗ್ರೇಟ್ ಬ್ಯಾಟ್ಸ್ ಮನ್ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಇಬ್ಬರೂ ಥಟ್ಟನೆ ಕೊಹ್ಲಿ ಹೆಸರು ಹೇಳುತ್ತಾರೆ. ಇಬ್ಬರಿಗೂ ವಿರಾಟ್ ಬೇಕಾದಷ್ಟು ಅವಕಾಶ ನೀಡಿದ್ದಾರೆ. ಹೀಗಾಗಿ ಇಬ್ಬರೂ ಕೊಹ್ಲಿ ಹೆಸರು ಹೇಳಿದ್ದರಲ್ಲಿ ಅಚ್ಚರಿಯೇನೂ ಇಲ್ಲ ಎಂದು ಕೆಲವರು ಕಾಲೆಳೆದಿದ್ದರೆ ಇನ್ನು ಕೆಲವರು ಇವರಿಬ್ಬರೂ ಬ್ಯಾಟ್ಸ್ ಮನ್ ಗಳಾಗಿ ಯಾಕೆ ಇಷ್ಟೊಂದು ಪರದಾಡುತ್ತಿದ್ದಾರೆ ಎಂದು ಈಗ ಗೊತ್ತಾಯಿತು ಎಂದಿದ್ದಾರೆ.

ಮತ್ತೆ ಕೆಲವರು ವ್ಯಂಗ್ಯ ಚಿತ್ರಗಳ ಮೂಲಕ ಇಬ್ಬರಿಗೂ ಬೆಂಡೆತ್ತಿದ್ದಾರೆ. ಅಂತೂ ಕ್ರಿಕೆಟ್ ಲೋಕದ ದೇವರು ಎಂದೇ ಪರಿಗಣಿತವಾಗಿರುವ ಸಚಿನ್ ಗಿಂತ ಕೊಹ್ಲಿಯನ್ನು ಹೊಗಳಲು ಹೋಗಿ ಇಬ್ಬರೂ ಚೆನ್ನಾಗಿಯೇ ಟೀಕೆಗೊಳಗಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ ಟಿ20 ಸರಣಿ, ಅದೊಂದು ದಾಖಲೆಯಾಗದಿದ್ರೆ ಸಾಕಪ್ಪಾ..

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಮುಂದಿನ ಸುದ್ದಿ
Show comments