Select Your Language

Notifications

webdunia
webdunia
webdunia
webdunia

ಕಳಪೆ ಆಟವಾಡಿ ಶೇಮ್ ಶೇಮ್ ಆದ ಮೇಲೆ ಕೆಎಲ್ ರಾಹುಲ್ ಮಾಡಿದ್ದೇನು ಗೊತ್ತಾ?!

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ
ಸಿಡ್ನಿ , ಶುಕ್ರವಾರ, 4 ಜನವರಿ 2019 (15:49 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದೂ ಮತ್ತೆ ಕಳಪೆ ಫಾರ್ಮ್ ಮುಂದುವರಿಸಿರುವ ಕೆಎಲ್ ರಾಹುಲ್ ಈಗ ತಮ್ಮ ಫಾರ್ಮ್ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡು ಕೂತಿದ್ದಾರೆ.


ಮೊದಲ ಇನಿಂಗ್ಸ್ ನಲ್ಲಿ 9 ರನ್ ಔಟ್ ಆಗಿ ಶೇಮ್ ಶೇಮ್ ಎನಿಸಿಕೊಂಡ ರಾಹುಲ್ ನೇರವಾಗಿ ನೆಟ್ಸ್ ಗೆ ಹೋಗಿ ಅಭ್ಯಾಸ ಮಾಡಿದ್ದಾರೆ. ತಮ್ಮ ಗೆಳೆಯ ಮಯಾಂಕ್ ಉತ್ತಮ ಆಟವಾಡಿರುವಾಗ ತಾವು ಕಳಪೆ ಆಟವಾಡಿರುವುದು ರಾಹುಲ್ ಗೆ ದೊಡ್ಡ ಮುಜುಗರ ತಂದಿದೆ.

ಹೀಗಾಗಿ ಟೀಂ ಇಂಡಿಯಾದ ಇತರ ಬ್ಯಾಟ್ಸ್ ಮನ್ ಗಳು ಆಡುವುದನ್ನು ನೋಡುತ್ತಾ ಕೂರುವುದನ್ನು ಬಿಟ್ಟು ತಾವಾಗಿಯೇ ಅಭ್ಯಾಸಕ್ಕಿಳಿದಿದ್ದಾರೆ. ಈ ಚಿತ್ರಗಳನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹನುಮ ವಿಹಾರಿ ಔಟ್ ತೀರ್ಪಿನ ಸುತ್ತ ಸುತ್ತಿಕೊಂಡ ವಿವಾದ