Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಎದುರು ಬ್ಯಾಟ್ ಬಿಸಾಕಿ ಸೆಲೆಬ್ರೇಟ್ ಮಾಡಿದ್ದರ ಬಗ್ಗೆ ಜೋ ರೂಟ್ ಪಶ್ಚಾತ್ತಾಪ

webdunia
ಲೀಡ್ಸ್ , ಶನಿವಾರ, 21 ಜುಲೈ 2018 (09:19 IST)
ಲೀಡ್ಸ್: ಟೀಂ ಇಂಡಿಯಾ ವಿರುದ್ಧ ಮೂರನೇ ಏಕದಿನ ಗೆದ್ದು, ಸರಣಿ ಕೈವಶವಾದ ಖುಷಿಯಲ್ಲಿ ವಿರಾಟ್ ಕೊಹ್ಲಿ ನೋಡುತ್ತಿದ್ದಂತೇ ಬ್ಯಾಟ್ ಬಿಸಾಕಿ ಸೆಲೆಬ್ರೇಷನ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ತಮ್ಮ ವರ್ತನೆಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
 

‘ಇದು ಅತ್ಯಂತ ನಾಚಿಕೆಗೇಡಿನ ವರ್ತನೆ. ನಾನು ಆ ಕ್ಷಣದಲ್ಲಿ ಮುಂದೇನಾಗಬಹುದು ಎಂದು ಯೋಚಿಸದೇ ಆ ರೀತಿ ಸಂಭ್ರಮಿಸಿದೆ. ಆದರೆ ಬಳಿಕ ನನ್ನ ತಂಡದ ಸಹ ಆಟಗಾರರೂ ಕೂಡಾ ನನ್ನ ವರ್ತನೆಯನ್ನು ಟೀಕಿಸಿದರು. ಇದು ನನ್ನಿಂದಾದ ಪ್ರಮಾದ’ ಎಂದು ರೂಟ್ ಹೇಳಿಕೊಂಡಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಜೋ ರೂಟ್ ಆ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ಎದುರಿಗೇ ಬ್ಯಾಟ್ ನೆಲಕ್ಕೆ ಹಾಕಿ ಸಂಭ್ರಮಿಸಿದ್ದರು. ರೂಟ್ ಅವರ ಈ ವರ್ತನೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಾದಿದೆ ಟೀಂ ಇಂಡಿಯಾ ದೊಡ್ಡ ಶಾಕ್