Publish Date: Sun, 31 Jan 2021 (09:55 IST)
Updated Date: Sun, 31 Jan 2021 (09:57 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ತಯಾರಾಗುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನೆಟ್ ಪ್ರಾಕ್ಟೀಸ್ ವೇಳೆ ಸ್ಪಿನ್ ದಿಗ್ಗಜ, ಮಾಜಿ ಕೋಚ್ ಅನಿಲ್ ಕುಂಬ್ಳೆಯನ್ನು ನೆನೆಸಿಕೊಂಡಿದ್ದಾರೆ.
ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುವಾಗ ಬುಮ್ರಾ ಥೇಟ್ ಅನಿಲ್ ಕುಂಬ್ಳೆ ಶೈಲಿಯಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಬುಮ್ರಾ ವೇಗದ ಬೌಲರ್. ಆದರೆ ನೆಟ್ಸ್ ನಲ್ಲಿ ಒಂದು ಬದಲಾವಣೆಗಾಗಿ ಕುಂಬ್ಳೆ ಶೈಲಿಯಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದನ್ನು ಟೀಂ ಇಂಡಿಯಾ ಟ್ವಿಟರ್ ಪೇಜ್ ಶೇರ್ ಮಾಡಿದೆ.