Publish Date: Sat, 30 Jan 2021 (10:21 IST)
Updated Date: Sat, 30 Jan 2021 (10:22 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬಳಿಕ ಆ ರಾಷ್ಟ್ರದ ಗೌರವದ ಸಂಕೇತವಾಗಿರುವ ಕಾಂಗಾರೂ ಪ್ರಾಣಿಯ ಹೋಲುವ ಕೇಕ್ ಕಟ್ ಮಾಡಲು ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರೆಹಾನೆ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು.
ರೆಹಾನೆ ಈ ರೀತಿ ಮಾಡಿರುವುದಕ್ಕೆ ಕಾರಣವೇನೆಂದು ಇದೀಗ ವಿವರಿಸಿದ್ದಾರೆ. ತಾನು ಅಂದು ಕಾಂಗಾರೂ ಕೇಕ್ ಕಟ್ ಮಾಡಲು ಒಪ್ಪದೇ ಇದ್ದಿದ್ದು ಗೌರವದಿಂದಾಗಿ ಎಂದಿದ್ದಾರೆ. ಕಾಂಗಾರೂ ಅವರ ರಾಷ್ಟ್ರೀಯ ಪ್ರಾಣಿ. ನೀವು ನಿಮ್ಮ ಎದುರಾಳಿಗಳು ಮತ್ತು ಅವರ ದೇಶವನ್ನು ಗೌರವಿಸಬೇಕು. ಅದು ಐತಿಹಾಸಿಕ ಸರಣಿ ಗೆಲುವಾದರೂ ಸರಿಯೇ. ನಾವು ಆ ರೀತಿ ಮಾಡುವುದು ಸರಿಯಲ್ಲ ಎಂದು ರೆಹಾನೆ ಹೇಳಿದ್ದಾರೆ.