Publish Date: Sun, 31 Jan 2021 (09:31 IST)
Updated Date: Sun, 31 Jan 2021 (09:33 IST)
ಸಿಡ್ನಿ: ಟೀಂ ಇಂಡಿಯಾ ವಿರುದ್ಧ 2-1 ಅಂತರದಿಂದ ಟೆಸ್ಟ್ ಸರಣಿ ಸೋತ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಒಡೆದ ಮನೆಯಾಗಿದೆ ಎಂದು ಅಲ್ಲಿನ ಮಾಧ‍್ಯಮಗಳು ವರದಿ ಮಾಡಿವೆ.
ಕೋಚ್ ಜಸ್ಟಿನ್ ಲ್ಯಾಂಗರ್ ಕಾರ್ಯವೈಖರಿ ಬಗ್ಗೆ ಆಟಗಾರರು ಅಸಮಾಧಾನ ಹೊಂದಿದ್ದಾರೆ. ವಿಪರೀತ ಸಿಟ್ಟು, ಕ್ಷಣಕ್ಕೊಂದು ನಿಯಮ ರೂಪಿಸುವ ಲ್ಯಾಂಗರ್ ವಿರುದ್ಧ ಆಟಗಾರರೇ ತಿರುಗಿಬಿದ್ದಿದ್ದಾರೆ. ತಂಡದಲ್ಲಿ ಸಕಾರಾತ್ಮಕ ವಾತಾವರಣವೇ ಇಲ್ಲ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.