Publish Date: Fri, 09 Mar 2018 (09:22 IST)
Updated Date: Fri, 09 Mar 2018 (09:24 IST)
ಕೊಲೊಂಬೋ: ಇದನ್ನಲ್ಲವೇ ವಿಪರ್ಯಾಸ ಎನ್ನುವುದು. ಕೆಎಲ್ ರಾಹುಲ್ ಎಂಬ ಕರ್ನಾಟಕ ಮೂಲದ ಕ್ರಿಕೆಟಿಗ ಟಿ20 ಕ್ರಿಕೆಟ್ ನಲ್ಲಿ ಸರಾಸರಿ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನೇ ಮೀರಿಸುತ್ತಾರೆ.
12 ಪಂದ್ಯಗಳನ್ನು ಆಡಿರುವ ರಾಹುಲ್ 458 ರನ್ ಗಳೊಂದಿಗೆ 50.88 ಸರಾಸರಿ ಹೊಂದಿದ್ದಾರೆ. ಕೊಹ್ಲಿ ಸರಾಸರಿ 50.44 ಇದೆಯಷ್ಟೇ. ಟಿ20 ಕ್ರಿಕೆಟ್ ನಲ್ಲಿ ಶತಕ ಭಾರಿಸಿದ ಕೇವಲ ಮೂರನೇ ಕ್ರಿಕೆಟಿಗ ರಾಹುಲ್.
ಇಷ್ಟೆಲ್ಲಾ ದಾಖಲೆ ಹೊಂದಿದ್ದರೂ ರಾಹುಲ್ ಗೆ ಅದೃಷ್ಟವಿಲ್ಲ. ಅದಕ್ಕೇ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಆರಂಭಿಕ ಸ್ಥಾನಕ್ಕಂತೂ ಆಗಲೇ ಖಾಯಂ ಆಟಗಾರರಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ಅಥವಾ ಮೂರನೇ ಕ್ರಮಾಂಕಕ್ಕೂ ರಾಹುಲ್ ಆಡಿಸಲು ಯಾಕೋ ತಂಡದ ಮ್ಯಾನೇಜ್ ಮೆಂಟ್ ಮನಸ್ಸೇ ಮಾಡದಿರುವುದು ವಿಪರ್ಯಾಸ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ