Publish Date: Thu, 16 Nov 2017 (14:15 IST)
Updated Date: Thu, 16 Nov 2017 (14:16 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಕೊನೆಗೂ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಆದರೆ ಮೊದಲ ಬಾಲ್ ಗೇ ಔಟ್ ಆಗಿ ಕನ್ನಡಿಗ ಕೆಎಲ್ ರಾಹುಲ್ ದಾಖಲೆ ಬರೆದಿದ್ದಾರೆ.
ಇನಿಂಗ್ಸ್ ಆರಂಭಿಸಲು ಶಿಖರ್ ಧವನ್ ಜತೆಗೆ ಬಂದ ರಾಹುಲ್ ಲಕ್ಮಲ್ ಎಸೆದ ಪಂದ್ಯದ ಮೊದಲ ಎಸೆತಕ್ಕೇ ಶೂನ್ಯಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಈ ರೀತಿ ಔಟಾದ ಭಾರತದ ಗವಾಸ್ಕರ್, ಸುಧೀರ್ ನಾಯಕ್, ಎಸ್ ಎಸ್ ದಾಸ್, ಡಬ್ಲ್ಯು ವಿ ರಾಮನ್ ಮತ್ತು ವಾಸಿಂ ಜಾಫರ್ ಸಾಲಿಗೆ ಸೇರಿದ್ದಾರೆ.
ರಾಹುಲ್ ವಿಕೆಟ್ ನ್ನು ಕಳೆದುಕೊಂಡ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ಕಳೆದುಕೊಂಡು 6 ಓವರ್ ಗಳಲ್ಲಿ 13 ರನ್ ಗಳಿಸಿದೆ. ಧವನ್ ಮತ್ತು ಚೇತೇಶ್ವರ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ