Publish Date: Thu, 16 Nov 2017 (09:53 IST)
Updated Date: Thu, 16 Nov 2017 (09:57 IST)
ರಾಂಚಿ: ಟೀಂ ಇಂಡಿಯಾ ಟೆಸ್ಟ್ ಸರಣಿ ಆಡುತ್ತಿರುವುದರಿಂದ ಬಿಡುವಿನ ವೇಳೆಯನ್ನು ಕುಟುಂಬದವರ ಜತೆ ಕಳೆಯುತ್ತಿರುವ ಕ್ರಿಕೆಟಿಗ ಧೋನಿಗೆ ಈಗ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ತಪ್ಪು ಮಾಡಿದರೆ ಮುಖ ಮುಚ್ಚಿಕೊಂಡು ಓಡಾಡಬೇಕು. ಆದರೆ ಧೋನಿ ಅಂತಹ ತಪ್ಪು ಏನು ಮಾಡಿದರು ಎಂದು ನಿಮಗೆ ಕುತೂಹಲವಾಗಬಹುದು. ಆದರೆ ಧೋನಿ ತಪ್ಪು ಮಾಡಿದ ಕಾರಣಕ್ಕೆ ಅಲ್ಲ, ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಓಡಾಡಿದ್ದಾರೆ.
ಪತ್ನಿ ಸಾಕ್ಷಿ ಸಿಂಗ್ ಮತ್ತು ಪುತ್ರಿ ಜೀವಾ ಜತೆ ವಿಮಾನ ಪ್ರಯಾಣ ಮಾಡಿದ ಧೋನಿ, ತನ್ನ ನಿಲ್ದಾಣ ಬಂದಾಗ ಇಳಿದು ಹೋಗುವ ವೇಳೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ತೆರಳಿದ್ದಾರೆ. ಕಾರಣ, ಅಭಿಮಾನಿಗಳು ಗುರುತಿಸಿ, ಕಾಟ ಕೊಡಬಾರದೆಂದು! ಇದನ್ನು ಸ್ವತಃ ಸಾಕ್ಷಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಪತಿಯ ಅವಸ್ಥೆಯನ್ನು ತಮಾಷೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ