Publish Date: Thu, 16 Nov 2017 (08:45 IST)
Updated Date: Thu, 16 Nov 2017 (08:48 IST)
ಕೋಲ್ಕೊತ್ತಾ: ವಿರಾಟ್ ಕೊಹ್ಲಿ ಎಂತಹಾ ಕೋಪಿಷ್ಠ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಸಿಟ್ಟಿಗೆದ್ದಿದ್ದಾರೆ.
ಕೊಹ್ಲಿ ಲಂಕಾ ಸರಣಿಯಲ್ಲಿ ಆಡಲ್ಲ. ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದೆಲ್ಲಾ ವರದಿಗಳು ಕೇಳಿಬಂದಿತ್ತು. ಈ ಬಗ್ಗೆ ಪತ್ರಕರ್ತರೊಬ್ಬರು ಕೊಹ್ಲಿ ಬಳಿ ಕೇಳಿದಾಗ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
‘ಯಾಕೆ ನನಗೂ ವಿಶ್ರಾಂತಿ ಬೇಡವೇ? ನನ್ನ ದೇಹಕ್ಕೆ ವಿಶ್ರಾಂತಿ ಬೇಕೆಂದು ನನಗನಿಸಿದಾಗ ಬಿಸಿಸಿಐ ಬಳಿ ನಾನೇ ಕೇಳಿ ಬಿಡುವು ಪಡೆಯುತ್ತೇನೆ. ನನಗೂ ವಿಶ್ರಾಂತಿ ಬೇಕು. ಯಾಕೆ ನಾನೂ ಮನುಷ್ಯನಲ್ಲವೇ? ರೋಬೋಟ್ ಥರಾ ಕಾಣ್ತಿದ್ದೀನಾ? ಬೇಕಿದ್ದರೆ ನನ್ನ ಚರ್ಮ ಸುಲಿದು ರಕ್ತ ಮಾಂಸ ಇದೆಯಾ ಎಂದು ಚೆಕ್ ಮಾಡಿ’ ಎಂದು ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹಿಂದೊಮ್ಮೆ ಧೋನಿ ಕೂಡಾ ನಾಯಕರಾಗಿದ್ದಾಗ ಪತ್ರಿಕಾಗೋಷ್ಠಿಯಲ್ಲಿ ಇದೇ ರೀತಿ ಸಿಟ್ಟಿಗೆದ್ದಿದ್ದರು. ತಂಡದಲ್ಲಿ ಒಡಕಿದೆಯೇ ಎಂದು ಪ್ರಶ್ನಿಸಿದಾಗ ಧೋನಿ ಇಡೀ ತಂಡವನ್ನೇ ಪೆರೇಡ್ ಮಾಡಬೇಕಾ ಎಂದು ಮರು ಪ್ರಶ್ನಿಸಿದ್ದರು. ಈಗ ಕೊಹ್ಲಿ ಕೂಡಾ ಧೋನಿ ರೀತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ