Ind vs Aus Test: ಕೊಹ್ಲಿ ಗುದ್ದಿದ್ದರ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸ್ಯಾಮ್ ಕೋನ್‌ಸ್ಟಾಸ್‌

Sampriya
ಗುರುವಾರ, 26 ಡಿಸೆಂಬರ್ 2024 (15:44 IST)
Photo Courtesy X
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆದ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವಾಡುತ್ತಿರುವ ಸ್ಯಾಮ್ ಕೋನ್‌ಸ್ಟಾಸ್‌ಗೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಪಂದ್ಯದ ವೇಳೆ ಡಿಕ್ಕಿಯಾದದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿದೆ.  

 ಆನ್-ಫೀಲ್ಡ್‌ನಲ್ಲಿ ವಿರಾಟ್ ಕೊಹ್ಲಿಯ ನಡವಳಿಕೆ ಮೇಲೆ ಅವರ ಪಂದ್ಯದ ಶುಲ್ಕದ 20% ದಂಡ ವಿಧಿಸಲಾಯಿತು ಮತ್ತು ಒಂದು ಡಿಮೆರಿಟ್ ಅಂಕವನ್ನು ನೀಡಲಾಯಿತು ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಇದೀಗ ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಏತನ್ಮಧ್ಯೆ ದಿನದಾಟದ ಬಳಿಕ ಮಾತನಾಡಿರುವ ಆಸ್ಟ್ರೇಲಿಯಾ ಆಟಗಾರ, ಕೊಹ್ಲಿ ತಮಗೆ ಭುಜ ತಾಗಿಸಿದ್ದು ಆಕಸ್ಮಿಕ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೊಹ್ಲಿ ವರ್ತನೆಯನ್ನು ಹಿರಿಯ ಕ್ರಿಕೆಟಿಗರು ಟೀಕಿಸಿದ್ದಾರೆ. ಚೊಚ್ಚಲ ಪಂದ್ಯವಾಡುತ್ತಿರುವ ಕೋನ್‌ಸ್ಟಾಸ್‌ ಅವರೊಂದಿಗೆ ಕೊಹ್ಲಿ ಆ ರೀತಿ ನಡೆದುಕೊಳ್ಳಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಚಾನೆಲ್‌ 7ಗೆ ಪ್ರತಿಕ್ರಿಯಿಸಿದ ಸ್ಯಾಮ್‌ ಕೋನ್‌ಸ್ಟಾಸ್‌ ಅವರು, ವಿರಾಟ್‌ ಕೊಹ್ಲಿ ನನಗೆ ಗುದ್ದಿದ್ದು ಆಕಸ್ಮಿಕ. ಇದು ಕ್ರಿಕೆಟ್‌. ಒತ್ತಡದಲ್ಲಿದ್ದಾಗ ಇಂಥವೆಲ್ಲ ಆಗುತ್ತವೆ ಎಂದರು.

ನಾವಿಬ್ಬರೂ ಭಾವೋದ್ವೇಗಕ್ಕೊಳಗಾದೆವು ಎನಿಸುತ್ತದೆ. ನಾನು ಕೈಗವಸು ಸರಿಪಡಿಸಿಕೊಳ್ಳುತ್ತಿದ್ದೆ. ಆಗ ಭುಜಕ್ಕೆ ಭುಜ ತಾಗಿತು. ಆಗ ಏನಾಯಿತು ಎಂಬುದು ಸರಿಯಾಗಿ ಗೊತ್ತಿಲ್ಲ. ಕ್ರಿಕೆಟ್‌ನಲ್ಲಿ ಇಂಥ ಘಟನೆಗಳು ಸಾಮಾನ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments