ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯವನ್ನು ರೋಚಕವಾಗಿ ಗೆಲ್ಲಲು ನೆರವಾದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಹಾರ್ದಿಕ್ ಪಾಂಡ್ಯ ಕೊನೆಯ ಕ್ಷಣದಲ್ಲಿ ಬ್ಯಾಟ್ ಮುರಿದುಕೊಂಡಿದ್ದರು.
18 ನೇ ಓವರ್ ನಲ್ಲಿ ಹಾರ್ದಿಕ್ ತಮ್ಮ ಬ್ಯಾಟ್ ಬದಲಾಯಿಸಿದರು. ಇದಕ್ಕೆ ಕಾರಣ ದೊಡ್ಡ ಹೊಡೆತ ಹೊಡೆಯಲು ಹೋಗಿ ಅವರ ಬ್ಯಾಟ್ ಮುರಿದಿತ್ತು. ವಿಶೇಷವೆಂದರೆ ಈ ಬ್ಯಾಟ್ ನಲ್ಲಿ ಹಾರ್ದಿಕ್ ಕಳೆದ ಮೂರು ವರ್ಷಗಳಿಂದ ಆಡುತ್ತಿದ್ದರಂತೆ. ಆದರೆ ತಂಡಕ್ಕೆ ಶತಾಯ ಗತಾಯ ಗೆಲುವು ಕೊಡಿಸುವ ಭರದಲ್ಲಿ ತಮ್ಮ ನೆಚ್ಚಿನ ಬ್ಯಾಟ್ ಮುರಿದಿದ್ದನ್ನೂ ಗಣನೆಗೆ ತೆಗೆದುಕೊಳ್ಳದೇ ಆಡಿದ್ದು ವಿಶೇಷವಾಗಿತ್ತು.