ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡ ರವೀಂದ್ರ ಜಡೇಜಾ ಬದಲಿ ಆಟಗಾರನಾಗಿ ಯಜುವೇಂದ್ರ ಚಾಹಲ್ ರನ್ನು ಆಡಿಸಿದ ವಿವಾದದ ಬಗ್ಗೆ ಅನಿಲ್ ಕುಂಬ್ಳೆ ಸ್ಪಷ್ಟನೆ ನೀಡಿದ್ದಾರೆ.
ಐಸಿಸಿಯ ನೀತಿ ನಿಯಮಾಳಿ ರೂಪಿಸುವ ಮಂಡಳಿಯ ಪ್ರಮುಖರೂ ಆಗಿರುವ ಕುಂಬ್ಳೆ ಜಡೇಜಾ ಸ್ಥಾನದಲ್ಲಿ ಚಾಹಲ್ ರನ್ನು ಬದಲಿ ಆಟಗಾರನಾಗಿ ಬಳಸಿದ್ದು ತಪ್ಪಲ್ಲ ಎಂದಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲ್ ಹ್ಯೂಸ್ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ ಬಳಿಕ ಈ ನಿಯಮಾವಳಿ ರೂಪಿಸಲಾಗಿದೆ. ಒಬ್ಬ ಆಲ್ ರೌಂಡರ್ ಸ್ಥಾನಕ್ಕೆ ಬೌಲರ್ ನ್ನು ಬದಲಿ ಆಟಗಾರನಾಗಿ ಬಳಸುವುದರಲ್ಲಿ ತಪ್ಪಿಲ್ಲ. ತಕ್ಷಣಕ್ಕೆ ಜಡೇಜಾ ಆಡಿದ್ದರು ಎಂಬ ಮಾತ್ರಕ್ಕೆ ಅವರಿಗೆ ತಲೆಗೆ ಪೆಟ್ಟಾಗಿ ತೊಂದರೆಯಾಗಿಲ್ಲ ಎಂದರ್ಥವಲ್ಲ. ಪೆವಿಲಿಯನ್ ಗೆ ಬಂದ ಮೇಲೆ ತಲೆಸುತ್ತು ಬಂದಿರಬಹುದು. ವೈದ್ಯರು ವಿಶ್ರಾಂತಿಗೆ ಸೂಚಿಸಿರಬಹುದು. ಇದರಲ್ಲಿ ತಪ್ಪೇನೂ ಇಲ್ಲ ಎಂದು ಕುಂಬ್ಳೆ ಹೇಳಿದ್ದಾರೆ.